ದೇಶ

ಕಳಪೆ ಕಾಮಗಾರಿ: ಪಿಡಬ್ಲ್ಯೂಡಿ ಎಂಜಿನಿಯರ್‌ಗೆ ಬಸ್ಕಿ ಹೊಡೆಸಿದ ಬಿಜೆಡಿ ಶಾಸಕನ ಬಂಧನ

ಕಳಪೆ ರಸ್ತೆ ಕಾಮಗಾರಿಗಾಗಿ ಲೋಕೋಪಯೋಗಿ ಕಿರಿಯ ಎಂಜಿನಿಯರ್‌ಗೆ ಸಾರ್ವಜನಿಕವಾಗಿ ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ್ದ ಬಿಜೆಡಿ ಶಾಸಕ ಸರೋಜ್ ಮೆಹೆರ್...

ಕಳಪೆ ಕಾಮಗಾರಿ: ಪಿಡಬ್ಲ್ಯೂಡಿ ಎಂಜಿನಿಯರ್‌ಗೆ ಬಸ್ಕಿ ಹೊಡೆಸಿದ ಬಿಜೆಡಿ ಶಾಸಕನ ಬಂಧನ
ಸರೋಜ್ ಮೆಹೆರ್
Published On :
ಭುವನೇಶ್ವರ: ಕಳಪೆ ರಸ್ತೆ ಕಾಮಗಾರಿಗಾಗಿ ಲೋಕೋಪಯೋಗಿ ಕಿರಿಯ ಎಂಜಿನಿಯರ್‌ಗೆ ಸಾರ್ವಜನಿಕವಾಗಿ ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ್ದ ಬಿಜೆಡಿ ಶಾಸಕ ಸರೋಜ್ ಮೆಹೆರ್ ಅವರನ್ನು ಸೋಮವಾರ ಒಡಿಶಾ ಪೊಲೀಸರು ಬಂಧಿಸಿದ್ದಾರೆ.
16ನೇ ವಿಧಾಸಭೆಯ ಅಧಿವೇಶನ ಆರಂಭವಾಗುವ ಮುನ್ನಾ ದಿನವೇ ಆಡಳಿತರೂಢ ಪಕ್ಷದ ಶಾಸಕರನ್ನು ಬಂಧಿಸಲಾಗಿದ್ದು, ಇಂದು ಬೆಳಗ್ಗೆ ವಿಚಾರಣೆಗಾಗಿ ಸರೋಜ್ ಮೆಹೆರ್ ಅವರನ್ನು ಪೊಲೀಸರ ವಶಕ್ಕೆ ಪಡೆದಿದ್ದರು. ವಿಚಾರಣೆ ಬಳಿಕ ಪೊಲೀಸರು ಬಿಜೆಡಿ ಶಾಸಕನನ್ನು ಬಂಧಿಸಿದ್ದು, ಪ್ರತಾಪಗಢ್ ಉಪ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಇತ್ತೀಚಿಗೆ ಬೆಲ್ಪಡಾದಲ್ಲಿ ಪಟ್ನಾಗಢದ ಬಿಜೆಡಿ ಶಾಸಕ ಸರೋಜ್ ಮೆಹೆರ್ ಅವರು ಕಿರಿಯ ಇಂಜಿನಿಯರ್ ಜಯಕಾಂತ್ ಸಬರ್ ಅವರಿಗೆ ಬಸ್ಕಿ ಹೊಡೆಸಿ ವಿವಾದಕ್ಕೀಡಾಗಿದ್ದಾರೆ. 
ಈ ದೃಶ್ಯವನ್ನು ಚಿತ್ರೀಕರಿಸಿದ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದರು.  ವಿಡಿಯೋ ವೈರಲ್ ಆಗುತ್ತಿದ್ದಂತೆ ಜಯಕಾಂತ್ ಅವರ ಪತ್ನಿ ಶಾಸಕರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. 
ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಇಂದು ಆರೋಪಿ ಶಾಸಕನನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.