8 ವರ್ಷದ ಮಗನನ್ನು ಕೊಂದ ತಾಯಿ: ಕೊಲೆಗೆ ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
ಎಂಟು ವರ್ಷದ ಮಗನನ್ನ ತಾಯಿಯ ಕೊಂದಿರುವ ದಾರುಣ ಘಟನೆ ಛತ್ತೀಸ್ ಗಡದ ರಾಯಗಡ ಜಿಲ್ಲೆಯಲ್ಲಿ ನಡೆದಿದೆ....

Published On :
ರಾಯಪುರ: ಎಂಟು ವರ್ಷದ ಮಗನನ್ನ ತಾಯಿಯ ಕೊಂದಿರುವ ದಾರುಣ ಘಟನೆ ಛತ್ತೀಸ್ ಗಡದ ರಾಯಗಡ ಜಿಲ್ಲೆಯಲ್ಲಿ ನಡೆದಿದೆ.
35 ವರ್ಷದ ಸುಖಮತಿ ಎಂಬ ಮಹಿಳೆ ಕೋಪದಿಂದ ಮಗುವನ್ನು ಸಲಾಕೆಯಿಂದ ಹೊಡೆದು ಕೊಂದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಕೆಯ ಪತಿ ಮಹಾವೀರ ಟಂಡೋ ಕೂಲಿ ಕಾರ್ಮಿಕನಾಗಿದ್ದು, ತನ್ನ 8 ವರ್ಷದ ಮಗ ಲೋಕೇಶ್ ನನ್ನು ಯಾವಾಗಲೂ ಥಳಿಸುತ್ತಿದ್ದನು, ಈ ವಿಷಯವಾಗಿ ಇಬ್ಬರಿಗೂ ಪದೇ ಪದೇಜಗಳ ನಡೆಯುತ್ತಿತ್ತು,
ಮಗ ಇಷ್ಟ ಇಲ್ಲ ಎಂಬ ಕಾರಣಕ್ಕೆ ಮಹಿಳೆ ತನ್ನ ಮಗನ ಜೊತೆ ಪ್ರೀತಿ ವಾತ್ಸಲ್ಯದಿಂದ ನಡೆದುಕೊಳ್ಳುತ್ತಿರಲಿಲ್ಲ, ಸಾರ್ವಜನಿಕವಾಗಿಯೇ ಮಗನ ಜೊತೆ ಕ್ರೂರವಾಗಿ ನಡೆದುಕೊಳ್ಳುತ್ತಿದ್ದಳು.
ಶುಕ್ರವಾರ ಮಹಾವೀರ್ ಮನೆಯಿಂದ ಹೊರ ಹೋಗಿದ್ದಾಗ, ಕೆಲ ವಿಷಯಗಳ ಬಗ್ಗೆ ಕೋಪದಿಂದ ಜಗಳ ಮಾಡಿಕೊಂಡು ಆತನ ಕುತ್ತಿಗೆಗೆ ಸಲಾಕೆಯಿಂದ ಹೊಡೆದಿದ್ದಾಳೆ, ಗಾಯಗೊಂಡ 8 ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಮಹಿಳೆ ತನ್ನ ಮಗನ ಜೊತೆ ಸಂತೋಷದಿಂದ ಇರಲಿಲ್ಲ ಎಂದು ತಿಳಿದು ಬಂದಿದೆ, ಈ ಸಂಬಂಧ ಪೊಲೀಸರು ಆಕೆಯನ್ನು ಹೆಚ್ಚಿನ ತನಿಖೆಗಾಗಿ ಬಂಧಿಸಿ ಕರೆದೊಯ್ದಿದ್ದಾರೆ, ಮಹಿಳೆಯ ಮಾನಸಿಕ ಸ್ಥಿತಿ ಪರೀಕ್ಷಿಸಲು ಪೊಲೀಸರು ನಿರ್ಧರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


