ಮೋದಿ ಸರ್ಕಾರದಿಂದ ಶುಕ್ರವಾರ ಲೋಕಸಭೆಯಲ್ಲಿ ಹೊಸ ತ್ರಿವಳಿ ತಲಾಕ್ ಮಸೂದೆ ಮಂಡನೆ
ತ್ರಿವಳಿ ತಲಾಕ್ ಪದ್ದತಿ ನಿಷೇಧಿಸಲು ಕುರಿತಂತೆ ಹೊಸ ಮಸುದೆಯನ್ನು ಪ್ರಧಾನಿ ನರೇಂದ್ರ ಮೋದಿಯವರ ಎನ್.ಡಿ.ಎ. ಸರ್ಕಾರ ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಲಿದೆ.

Published On :
ನವದೆಹಲಿ: ತ್ರಿವಳಿ ತಲಾಕ್ ಪದ್ದತಿ ನಿಷೇಧಿಸಲು ಕುರಿತಂತೆ ಹೊಸ ಮಸುದೆಯನ್ನು ಪ್ರಧಾನಿ ನರೇಂದ್ರ ಮೋದಿಯವರ ಎನ್.ಡಿ.ಎ. ಸರ್ಕಾರ ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಲಿದೆ.
ಲೋಕಸಭೆಯ ಕಾರ್ಯಸೂಚಿಯಲ್ಲಿ ಶುಕ್ರವಾರ ಪಟ್ಟಿ ಮಾಡಲಾಗಿರುವ ವಿಷಯಗಳಲ್ಲಿ ಮುಸ್ಲಿಂ ಮಹಿಳಾ (ವಿವಾಹದ ಹಕ್ಕುಗಳ ಸಂರಕ್ಷಣೆ) ಮಸೂದೆ, 2019 ಇದ್ದು ಇದರಲ್ಲಿ ಈ ಹಿಂದಿನ ಎನ್ ಡಿಎ ಸರ್ಕಾರವು ಫೆಬ್ರವರಿಯಲ್ಲಿ ಹೊರಡಿಸಿದ ಸುಗ್ರೀವಾಜ್ಞೆಯನ್ನು ಮುರಿದು ಹೊಸ ಮಸೂದೆ ಮಂಡಿಸಲಿದೆ.
ಕಳೆದ ಬಾರಿ ಮಸೂದೆಯು ಲೋಕಸಭೆಯಲ್ಲಿ ಅಂಗೀಕಾರವಾಗಿದ್ದು ರಾಜ್ಯಸಬೆಯಲ್ಲಿ ಬಾಕಿ ಉಳಿದಿರುವಂತೆಯೇ 16 ನೇ ಲೋಕಸಭೆ ವಿಸರ್ಜನೆಯಾಗಿದ್ದ ಕಾರಣ ಆ ಮಸೂದೆ ತನ್ನ ಮೌಲ್ಯ ಕಳೆದುಕೊಂಡಿತ್ತು. ಇದೀಗ ಮತ್ತೆ ಮೋದಿ ಸರ್ಕಾರ ಹೊಸದಾಗಿ ತ್ರಿವಳಿ ತಲಾಕ್ ಮಸೂದೆಯನ್ನು ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಮಂಡನೆ ಮಾಡಬೇಕಿದೆ.
ತ್ವರಿತ ತ್ರಿವಳಿ ತಲಾಕ್ ಅಭ್ಯಾಸವನ್ನು ದಂಡನಾರ್ಹ ಅಪರಾಧವನ್ನಾಗಿ ಪರಿಗಣಿಸಲು ಪ್ರಸ್ತಾಪಿಸಿರುವ ಈ ಮಸೂದೆಯು ವಿರೋಧ ಪಕ್ಷಗಳ ಆಕ್ಷೇಪಣೆಯನ್ನು ಎದುರಿಸಿದ್ದು, ತನ್ನ ಹೆಂಡತಿಯಿಂದ ವಿಚ್ಚೇದನ ಪಡೆದ ಮಾತ್ರಕ್ಕೆ ಒಬ್ಬನಿಗೆ ಜೈಲು ಶಿಕ್ಷೆ ವಿಧಿಸುವುದು ಕಾನೂನು ಸಮ್ಮತವಾಗಲಾರದು ಎಂದು ವಾದಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
bjpPM ModiNDAtriple talaq billತ್ರಿವಳಿ ತಲಾಕ್ ಮಸೂದೆMuslim Women (Protection of Rights on Marriage) Bill 2019ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಮಸೂದೆ 2019ಪಿಎಂ ಮ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


