ದೇಶ

ವಾಯುಪಡೆ ವಿಮಾನ ಪತನ ಪ್ರದೇಶದಿಂದ ಆರು ಮೃತದೇಹಗಳು,ಏಳು ಕಳೇಬರ ವಶ

ಅರುಣಾಚಲ ಪ್ರದೇಶದ ಸಿಯಾಂಗ್ ಜಿಲ್ಲೆಯಲ್ಲಿ ಜೂನ್ 3 ರಂದು ನಡೆದಿದ್ದ ವಾಯುಪಡೆಯ ಎಎನ್-32 ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದ ಭಾರತೀಯ ವಾಯುಪಡೆಯ ಏಳು ಯೋಧರ ಕಳೇಬರ ಹಾಗೂ ಆರು ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಾಯುಪಡೆ ವಿಮಾನ ಪತನ ಪ್ರದೇಶದಿಂದ ಆರು ಮೃತದೇಹಗಳು,ಏಳು ಕಳೇಬರ ವಶ
ಎಎನ್ -32 ವಿಮಾನ ಅಪಘಾತ ಪ್ರದೇಶ
Published On :
ಗುವಾಹಟಿ:  ಅರುಣಾಚಲ ಪ್ರದೇಶದ  ಸಿಯಾಂಗ್ ಜಿಲ್ಲೆಯಲ್ಲಿ ಜೂನ್ 3 ರಂದು  ನಡೆದಿದ್ದ ವಾಯುಪಡೆಯ ಎಎನ್-32 ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದ ಭಾರತೀಯ ವಾಯುಪಡೆಯ ಏಳು ಯೋಧರ ಕಳೇಬರ ಹಾಗೂ  ಆರು ಮೃತದೇಹಗಳನ್ನು  ವಶಪಡಿಸಿಕೊಳ್ಳಲಾಗಿದೆ. 
ಪಶ್ಚಿಮ ಸಿಯಾಂಗ್  ಜಿಲ್ಲಾ ಕೇಂದ್ರ ಆಲೋನಲ್ಲಿನ  ಭಾರತೀಯ ವಾಯುಪಡೆಯ ಕೇಂದ್ರ ಕಚೇರಿಗೆ ಯೋಧರ  ಕಳೇಬರ  ಹಾಗೂ ಮೃತದೇಹಗಳನ್ನು ತೆಗೆದುಕೊಂಡು ಹೋಗಲಾಗಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.
ವಿಮಾನ ಅಪಘಾತ ಅವಶೇಷಗಳು ದೊರೆತ ಪ್ರದೇಶದಲ್ಲಿ  ಏಳು ಯೋಧರ ಕಳೇಬರ ಹಾಗೂ ಆರು ಮೃತದೇಹಗಳು ಸೇರಿದಂತೆ ಒಟ್ಟಾರೇ, 13 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಶಿಲಾಂಗ್ ವಾಯುನೆಲೆಯ  ವಕ್ತಾರ ವಿಂಗ್ ಕಮಾಂಡರ್ ರತ್ನಾಕರ್ ಸಿಂಗ್ ಇಂದು ಹೇಳಿದ್ದಾರೆ.
ಜೂನ್ 11 ರಂದು ಅಪಘಾತಗೊಂಡ ವಿಮಾನ ಅವಶೇಷಗಳು ಪತ್ತೆಯಾಗಿತ್ತು. ಜೂನ್ 12 ರಂದು 18 ರಕ್ಷಣಾ ಸಿಬ್ಬಂದಿಯನ್ನೊಳಗೊಂಡ ಎರಡು ತಂಡಗಳು ಅವಶೇಷಗಳು ದೊರೆತ ಸ್ಥಳಕ್ಕೆ ಭೇಟಿ ನೀಡಿದ್ದವು. 20 ಸಿಬ್ಬಂದಿಯನ್ನೊಳಗೊಂಡ ಮೂರನೇ ತಂಡ ಎರಡು ದಿನಗಳ ಹಿಂದಷ್ಟೇ ಈ ಸ್ಥಳಕ್ಕೆ ಭೇಟಿ ನೀಡಿದ್ದಾಗಿ ವಾಯುಪಡೆಯ ಅಧಿಕಾರಿ ಡಿರೊಚಿ ಹೇಳಿದ್ದಾರೆ.
ರಷ್ಯಾ ನಿರ್ಮಿತ ಭಾರತೀಯ ವಾಯುಪಡೆಯ ಎಎನ್-32 ವಿಮಾನ ಜೂನ್ 3 ರಂದು ಜರ್ಹಾತ್ ವಾಯುನೆಲೆಯಿಂದ ನಾಪತ್ತೆಯಾಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.