ಏಳು ಎದ್ದೇಳು ಅಪ್ಪ; ಹುತಾತ್ಮ ತಂದೆಯನ್ನು ಎಬ್ಬಿಸಲು ಮುಂದಾದ ಪುಟ್ಟ ಮಗು, ಬಿಕ್ಕಿ ಬಿಕ್ಕಿ ಅತ್ತ ಪೊಲೀಸ್!
ಉಗ್ರರ ದಾಳಿಯಲ್ಲಿ ಹುತಾತ್ಮರಾಗಿದ್ದ ತಂದೆ ಮುಂದೆ ನಿಂತ ಪುಟ್ಟ ಮಗು ಏಳು ಎದ್ದೇಳು ಅಪ್ಪ ಎಂದು ಹೇಳಿ ಸೆಲ್ಯೂಟ್ ಹೊಡೆದಿದ್ದು ಇದನ್ನು ಕಂಡ ಪೊಲೀಸ್ ಅಧಿಕಾರಿ ಬಿಕ್ಕಿ ಬಿಕ್ಕಿ ಅಳುತ್ತಿರುವ ಪೋಟೋ ಸಾಮಾಜಿಕ...

Published On :
ಶ್ರೀನಗರ: ಉಗ್ರರ ದಾಳಿಯಲ್ಲಿ ಹುತಾತ್ಮರಾಗಿದ್ದ ತಂದೆ ಮುಂದೆ ನಿಂತ ಪುಟ್ಟ ಮಗು ಏಳು ಎದ್ದೇಳು ಅಪ್ಪ ಎಂದು ಹೇಳಿ ಸೆಲ್ಯೂಟ್ ಹೊಡೆದಿದ್ದು ಇದನ್ನು ಕಂಡ ಪೊಲೀಸ್ ಅಧಿಕಾರಿ ಬಿಕ್ಕಿ ಬಿಕ್ಕಿ ಅಳುತ್ತಿರುವ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಪುರದಲ್ಲಿ ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಇನ್ಸ್ ಪೆಕ್ಟರ್ ಅರ್ಶದ್ ಖಾನ್ ಹುತಾತ್ಮರಾಗಿದ್ದರು. ಅರ್ಶದ್ ಶ್ರದ್ಧಾಂಜಲಿ ವೇಳೆ ಶ್ರೀನಗರದ ಎಸ್ಎಸ್ ಪಿ ಹಸೀಬ್ ಮೊಘಲ್, ಹುತಾತ್ಮ ಪೊಲೀಸ್ ಅಧಿಕಾರಿಯ 4 ವರ್ಷದ ಪುಟ್ಟ ಉಹ್ಬಾನ್ ರನ್ನು ಎತ್ತಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ಫೋಟೋ ಮನಕಲಕುವಂತಿದೆ.
ಜೂನ್ 12ರಂದು ಅನಂತನಾಗ್ ನಲ್ಲಿ ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಕಾಶ್ಮೀರದ ಪೊಲೀಸ್ ಅಧಿಕಾರಿ ಸಿಎಚ್ಒ ಅರ್ಶದ್ ಖಾನ್ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಜಮ್ಮು ಮತ್ತು ಕಾಶ್ಮೀರTerror AttackJammu and Kashmirmartyrಹುತಾತ್ಮಉಗ್ರ ದಾಳಿArshad KhanEmotional farewellಭಾವನಾತ್ಮಕ ಶ್ರದ್ಧಾಂಜಲಿಅರ್ಶದ್ ಖಾನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


