ಓಂ ಬಿರ್ಲಾ ಲೋಕಸಭೆಯ ನೂತನ ಸ್ಪೀಕರ್ ಆಗಲು 10 ಪಕ್ಷಗಳ ಬೆಂಬಲ- ಪ್ರಹ್ಲಾದ್ ಜೋಷಿ
ನವದೆಹಲಿ: 17 ನೇ ಲೋಕಸಭೆಯ ಸ್ಪೀಕರ್ ಹುದ್ದೆಗೆ ಬಿಜೆಪಿ ಆಯ್ಕೆ ಮಾಡಿರುವ ಸಂಸದ ಓಂ ಬಿರ್ಲಾ ಅವರಿಗೆ 10 ರಾಜಕೀಯ ಪಕ್ಷಗಳು ಬೆಂಬಲ ನೀಡಿವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.

Published On :
ನವದೆಹಲಿ: 17 ನೇ ಲೋಕಸಭೆಯ ಸ್ಪೀಕರ್ ಹುದ್ದೆಗೆ ಬಿಜೆಪಿ ಆಯ್ಕೆ ಮಾಡಿರುವ ಸಂಸದ ಓಂ ಬಿರ್ಲಾ ಅವರಿಗೆ 10 ರಾಜಕೀಯ ಪಕ್ಷಗಳು ಬೆಂಬಲ ನೀಡಿವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
ನಾಳೆ ಲೋಕಸಭೆಯ ಸ್ಪೀಕರ್ ಹುದ್ದೆ ಚುನಾವಣೆ ನಡೆಯಲಿದ್ದು, ರಾಜಸ್ತಾನದ ಕೊಟಾದಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಓಂ ಬಿರ್ಲಾ ಅವರಿಗೆ ಬಿಜು ಜನತಾ ದಳ ವೈ ಎಸ್ ಆರ್ ಕಾಂಗ್ರೆಸ್ ಪಕ್ಷ ಸೇರಿದಂತೆ 10 ಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಸ್ಪೀಕರ್ ಹುದ್ದೆಗಾಗಿ ನಾಳೆ ಚುನಾವಣೆ ನಡೆಯಲಿದ್ದು, ಬಿಜೆಡಿ, ಶಿವಸೇನಾ, ಅಕಾಲಿ ದಳ, ಎನ್ ಪಿಪಿ, ಎಂಎನ್ ಎಫ್, ಲೋಕ ಜನಾಶಕ್ತಿ ಪಾರ್ಟಿ, ವೈಎಸ್ ಆರ್ ಕಾಂಗ್ರೆಸ್ , ಜೆಡಿಯು, ಎಐಎಡಿಎಂಕೆ, ಅಪ್ನಾ ದಳ ಪಕ್ಷಗಳು ಬೆಂಬಲ ನೀಡಿವೆ. ಕಾಂಗ್ರೆಸ್ ಮುಖಂಡರಾದ ಕೆ. ಸುರೇಶ್ , ಗುಲಾಂ ನಬಿ ಅಜಾದ್ ಜೊತೆಗೆ ಮಾತನಾಡಿದ್ದೇನೆ. ಈವರೆಗೂ ಅವರು ಸಹಿ ಮಾಡಿಲ್ಲ. ಆದರೆ, ಅವರು ಬಿರ್ಲಾರನ್ನು ವಿರೋಧಿಸುವುದಿಲ್ಲ ಅನ್ನಿಸುತ್ತಿದೆ ಎಂದು ಹೇಳಿದರು.
57 ವರ್ಷದ ಬಿರ್ಲಾ ಕೊಟಾ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಮ್ನರೈನ್ ಮೀನಾ ವಿರುದ್ಧ ಸುಮಾರು ಎರಡೂವರೆ ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಒಂದು ವೇಳೆ ಸ್ಪೀಕರ್ ಹುದ್ದೆಗೆ ಅವರೇ ಆಯ್ಕೆಯಾದರೆ ಸುಮಿತ್ರಾ ಮಹಾಜನ್ ಅವರ ಉತ್ತರಾಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


