ದೇಶ

ಅಪ್ರಾಪ್ತರ ಮೇಲೆ ನಡೆಯುವಂತಹದ್ದು ಅತ್ಯಾಚಾರ, ಮಹಿಳೆಯರ ಮೇಲಿನ ರೇಪ್ ವಿಭಿನ್ನ: ಉತ್ತರ ಪ್ರದೇಶ ಸಚಿವ

ಅತ್ಯಾಚಾರದಂತಹ ಹೀನ ಕೃತ್ಯದ ಬಗ್ಗೆ ಉತ್ತರ ಪ್ರದೇಶದ ಜಲ ಸಂಪನ್ಮೂಲ , ಅರಣ್ಯ ಮತ್ತು ಪರಿಸರ ಸಚಿವ ಉಪೇಂದ್ರ ತಿವಾರಿ ಹೊಸ ರೀತಿಯಲ್ಲಿ ವರ್ಗೀಕರಣ ಮಾಡಿದ್ದಾರೆ. ಮಕ್ಕಳ ಮೇಲೆ ನಡೆಯುವುದು ನಿಜವಾದ ಅತ್ಯಾಚಾರ ಆದರೆ, ವಿವಾಹಿತ ಮಹಿಳೆ ಮೇಲಿನ ಅತ್ಯಾಚಾರ ವಿಭಿನ್ನ ಎಂದಿದ್ದಾರೆ

ಅಪ್ರಾಪ್ತರ ಮೇಲೆ ನಡೆಯುವಂತಹದ್ದು ಅತ್ಯಾಚಾರ, ಮಹಿಳೆಯರ ಮೇಲಿನ ರೇಪ್ ವಿಭಿನ್ನ: ಉತ್ತರ ಪ್ರದೇಶ ಸಚಿವ
ಸಚಿವ ಉಪೇಂದ್ರ ತಿವಾರಿ
Published On :
ಗೊಂಡಾ: ಅತ್ಯಾಚಾರದಂತಹ ಹೀನ ಕೃತ್ಯದ ಬಗ್ಗೆ ಉತ್ತರ ಪ್ರದೇಶದ ಜಲ ಸಂಪನ್ಮೂಲ , ಅರಣ್ಯ ಮತ್ತು ಪರಿಸರ ಸಚಿವ ಉಪೇಂದ್ರ ತಿವಾರಿ ಹೊಸ ರೀತಿಯಲ್ಲಿ ವರ್ಗೀಕರಣ ಮಾಡಿದ್ದಾರೆ. ಮಕ್ಕಳ ಮೇಲೆ ನಡೆಯುವುದು ನಿಜವಾದ ಅತ್ಯಾಚಾರ  ಆದರೆ, ವಿವಾಹಿತ ಮಹಿಳೆ ಮೇಲಿನ ಅತ್ಯಾಚಾರ ಬೇರೆಯಾಗಿರುತ್ತದೆ ಎಂದಿದ್ದಾರೆ. 
ರಾಜ್ಯದಲ್ಲಿನ ಅತ್ಯಾಚಾರ ಪ್ರಕರಣಗಳ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ತಿವಾರಿ, ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ ರೇಪ್, ಆದರೆ, ಮಧ್ಯ ವಯಸ್ಸಿನ ಹೆಂಗಸರ ಮೇಲಿನ ಅತ್ಯಾಚಾರ ವಿಭಿನ್ನವಾದದ್ದು ಎಂದರು.
ಅಲಿಘಡದಲ್ಲಿ ತಂದೆಯೊಂದಿಗಿನ  ಹಣಕಾಸು ವಿವಾದ ಹಿನ್ನೆಲೆಯಲ್ಲಿ ಎರಡೂವರೆ ವರ್ಷದ ಬಾಲಕಿ ಟ್ವಿಂಕಲ್ ಶರ್ಮಾ ಕೊಲೆ ಸೇರಿದಂತೆ ಉತ್ತರ ಪ್ರದೇಶದಲ್ಲಿನ ಅತ್ಯಾಚಾರ ಪ್ರಕರಣಗಳ  ಹಿನ್ನೆಲೆಯಲ್ಲಿ ಪ್ರಮುಖ ಆರೋಪಿ ಜಾಹಿದ್  ನನ್ನು ಪೊಲೀಸರು ಬಂಧಿಸಿದ್ದಾರೆ. 
ಯೋಗಿ ಆದಿತ್ಯನಾಥ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಹಿನ್ನೆಲೆಯಲ್ಲಿ ಪತ್ರಕರ್ತರ ಬಂಧನ ಕುರಿತಂತೆ ಪ್ರತ್ರಿಯಿಸಿದ ಸಚಿವರು, ಸುದ್ದಿಗಳ ಪ್ರಸಾರದ ಬಗ್ಗೆ ಪತ್ರಕರ್ತರು ಜವಾಬ್ದಾರರಾಗಬೇಕಾಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುವ ಮುನ್ನ ಎಲ್ಲಾ ಮಾಧ್ಯಮ ವ್ಯಕ್ತಿಗಳು ವಾಸ್ತವಾಂಶಗಳನ್ನು ಪರಿಶೀಲಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.