ಶೌಚಾಲಯದಲ್ಲಿ ಗಾಂಧೀಜಿ ಚಿತ್ರವಿದ್ದ ಟೈಲ್ಸ್ ಬಳಕೆ: ಅಧಿಕಾರಿ ಅಮಾನತು
ಸ್ವಚ್ಚ ಭಾರತ ಅಭಿಯಾನದಡಿ ನಿರ್ಮಿಸಲಾಗಿದ್ದ ಶೌಚಾಯದ ಗೋಡೆಗಳ ಮೇಲೆ ಗಾಂಧೀಜಿ ಹಾಗೂ ಅಶೋಕ ಚಕ್ರಗಳ ಚಿತ್ರವಿರುವ ಟೈಲ್ಸ್ ಕಂಡುಬಂದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು ....

Published On :
ಬುಲಂದರಷಹರ್: ಸ್ವಚ್ಚ ಭಾರತ ಅಭಿಯಾನದಡಿ ನಿರ್ಮಿಸಲಾಗಿದ್ದ ಶೌಚಾಯದ ಗೋಡೆಗಳ ಮೇಲೆ ಗಾಂಧೀಜಿ ಹಾಗೂ ಅಶೋಕ ಚಕ್ರಗಳ ಚಿತ್ರವಿರುವ ಟೈಲ್ಸ್ ಕಂಡುಬಂದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು ಘಟನೆಗೆ ಸಂಬಂಧಿಸಿ ಗ್ರಾಮೀಣಾಭಿವೃದ್ಧಿ ಅಧಿಕಾರಿಯೊಬ್ಬರನ್ನು ಅಮಾನತು ಮಾಡಲಾಗಿದೆ. ಇಖ್ವಾರಿ ಗ್ರಾಮದ ಮುಖ್ಯಸ್ಥರಿಗೆ ಸಹ ನೋಟೀಸ್ ನೀಡಲಾಗಿದೆ.
ಶೌಚಾಲಯದ ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು.ಗ್ರಾಮಸ್ಥರು ಹೇಳುವಂತೆ ಗ್ರಾಮದ ಮುಖ್ಯಸ್ಥನ ಸೂಚನೆಯಂತೆ ಶೌಚಾಲಯಕ್ಕೆ ಈ ಟೈಲ್ಸ್ ಗಳನ್ನು ಬಳಸಲಾಗಿತ್ತು.
"ನಾವು ಅದರ ವಿರುದ್ಧ ದೂರು ನೀಡಿದಾಗ, ಉನ್ನತಾಧಿಕಾರಿಗಳ ತೀರ್ಮಾನದಂತೆಇದನ್ನು ನಿರ್ಮಿಸಲಾಗಿದೆ. ನಾವು ಇದರಲ್ಲಿ ಮಧ್ಯೆ ಪ್ರವೇಶಿಸಬಾರದೆಂದು ನಮಗೆ ತಿಳಿಸಲಾಗಿತ್ತು. ಆದರೆ ಶೌಚಾಲಯದ ವೀಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ನಂತರ ಕ್ರಮ ತೆಗೆದುಕೊಳ್ಳಲಾಗಿದೆ "ಅವರು ಹೇಳಿದರು.
ಪ್ರಾಥಮಿಕ ತನಿಖೆಯ ಬಳಿಕ ಗ್ರಾಮೀಣಾಭಿವೃದ್ಧಿಅಧಿಕಾರಿ ಸಂತೋಷ್ ಕುಮಾರ್ ಅವರನ್ನು ಅಮಾನತ್ತುಗೊಳಿಸಲಾಗಿದ್ದು ಗ್ರಾಮದ ಮುಖ್ಯಸ್ಥೆ ಸಾವಿತ್ರಿ ದೇವಿಗೆ ನೋಟೀಸ್ ನೀಡಲಾಗಿದೆ.
ಗ್ರಾಮದಲ್ಲಿ ನಿರ್ಮಿಸಿದ 13 ಶೌಚಾಲಯಗಳ ಗೋಡೆಗಳ ಮೇಲೆ ಗಾಂಧೀಜಿ ಹಾಗೂ ಅಶೋಕ ಚಕ್ರವಿರುವ ಟೈಲ್ಸ್ ಗಳನ್ನು ಬಳಸಲಾಗಿತ್ತು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.ಈ ಗ್ರಾಮದಲ್ಲಿ 508 ಶೌಚಾಲಯಗಳನ್ನು ಸ್ವಚ್ಚ ಬಾರತ್ ಅಭಿಯಾನದಡಿ ನಿರ್ಮಾಣ ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


