ಜೂನ್ 21 ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ಮೋದಿಯ 'ತಾಡಾಸನ' ವಿಡಿಯೋ ವೈರಲ್
ಜೂನ್ 21ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೇಶದ ಜನರೂ ಸಜ್ಜಾಗುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ತಾಡಾಸನ ವೀಡಿಯೊವನ್ನು ಟ್ವೀಟ್ ಮೂಲಕ ಪೋಸ್ಟ್ ಮಾಡಿದ್ದಾರೆ.

Published On :
ನವದೆಹಲಿ: ಜೂನ್ 21ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೇಶದ ಜನರೂ ಸಜ್ಜಾಗುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ತಾಡಾಸನ ವೀಡಿಯೊವನ್ನು ಟ್ವೀಟ್ ಮೂಲಕ ಪೋಸ್ಟ್ ಮಾಡಿದ್ದಾರೆ.
ತಾಡಾಸನ ಅಥವಾ ಪರ್ವತ ಭಂಗಿಯಾಗಿರುವ ಈ ಯೋಗಾಸನದ ಆನಿಮೇಟೆಡ್ ವೀಡಿಯೊದಲ್ಲಿ ಆಸನ ಹೇಗೆ ಮಾಡುವುದೆಂಬುದನ್ನು ಹಂತ ಹಂತವಾಗಿ ವಿವರಿಸಲಾಗಿದೆ. ಜತೆಗೆ ಇದರಿಂದಾಗುವ ಪ್ರಯೋಜನಗಳನ್ನೂ ತಿಳಿಯಪಡಿಸಲಾಗಿದೆ.
ತಾಡಾಸನವನ್ನು ಸರಿಯಾಗಿ ಮಾಡಿದರೆ , ಇತರೆ ಆಸನಗಳನ್ನು ಸುಲಭವಾಗಿ ಮಾಡಲು ಅನುಕೂಲವಾಗುತ್ತದೆ ಎಂದು ಪ್ರಧಾನಿ ವಿಡಿಯೋ ಟ್ವೀಟ್ ಮಾಡಿ ಹೇಳಿದ್ದಾರೆ.
3ಡಿ ಆನಿಮೇಶನ್ ವಿಡಿಯೋದಲ್ಲಿ , ಹಸಿರಿನ ಹಿನ್ನೆಲೆಯ ವಾತಾವರಣದಲ್ಲಿ ಸಾಕಷ್ಟು ಗಾಳಿ ಬೆಳಕಿರುವ ಕೊಠಡಿಯಲ್ಲಿ ಮೋದಿಯನ್ನೇ ಹೋಲುವ ವ್ಯಕ್ತಿಯ ಮರೂನ್ ಬಣ್ಣದ ನೆಲಹಾಸಿನ ಮೇಲೆ ನಿಂತುಕೊಂಡು ತಾಡಾಸನ ಮಾಡುವ ಚಿತ್ರಣವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
New Delhiಪ್ರಧಾನಿ ಮೋದಿInternational Yoga Dayಅಂತಾರಾಷ್ಟ್ರೀಯ ಯೋಗ ದಿನPMModiTadasana Video ನವ ದೆಹಲಿತಾಡಾಸನ ವಿಡಿಯೋ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


