ಸೈಬರ್ ಫ್ರಾಡ್: ಡೇಟಿಂಗ್ ವೆಬ್ ಸೈಟ್ ಗೀಳಿನಿಂದ 14 ಲಕ್ಷ ರೂ. ಕಳೆದುಕೊಂಡ ವಿದ್ಯಾರ್ಥಿ!
ಡೇಟಿಂಗ್ ವೆಬ್ ಸೈಟ್ ನಿಂದ ಮಾನ್ಸೂರಾಬಾದಿನ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ 14 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ.

Published On :
ಹೈದ್ರಾಬಾದ್: ಆನ್ ಲೈನ್ ನಲ್ಲಿ ಲೈಂಗಿಕತೆಗೆ ಸಂಬಂಧಿಸಿದಂತೆ ವಿವಿಧ ಜಾಹೀರಾತುಗಳನ್ನು ನೋಡಿ ಜನರನ್ನು ಮೋಸ ಮಾಡುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಲೇ ಇದೆ.
ಇದೇ ರೀತಿಯಲ್ಲಿ ಡೇಟಿಂಗ್ ವೆಬ್ ಸೈಟ್ ನಿಂದ ಮಾನ್ಸೂರಾಬಾದಿನ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ 14 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ.
22 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ಒಂದು ತಿಂಗಳ ಹಿಂದೆ ಡೇಟಿಂಗ್ ವೆಬ್ ಸೈಟ್ ನಲ್ಲಿ ಎಸ್ಕಾರ್ಟ್ ಸರ್ವೀಸ್ ಜಾಹೀರಾತು ನೋಡಿ ಆಕರ್ಷಿತಗೊಂಡಿದ್ದು, ಲೈಂಗಿಕ ಸೇವೆ ಪಡೆಯಲು ಆಸಕ್ತಿ ವ್ಯಕ್ತಪಡಿಸಿದ್ದಾರೆ.
ನಂತರ ನೋಂದಣಿಯ ನೆಪದಲ್ಲಿ ಮೊದಲು ಸ್ವಲ್ಪ ಹಣ ಕಟ್ಟಿಸಿಕೊಳ್ಳಲಾಗಿದೆ. ತದನಂತರ ವಿವಿಧ ರೀತಿಯ ಸುಳ್ಳುಗಳನ್ನು ಹೇಳಿ ಸುಮಾರು 14 ಲಕ್ಷ ರೂಪಾಯಿ ಪೀಕಿರುವುದಾಗಿ ಆತ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
hyderabadಇಂಜಿನಿಯರಿಂಗ್ ವಿದ್ಯಾರ್ಥಿdating websiteಡೇಟಿಂಗ್ ವೆಬ್ ಸೈಟ್ಸೈಬರ್ ವಂಚನೆCyber fraudEngineering student ಹೈದ್ರಾಬಾದ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


