ಉನ್ನಾವ್ ರೇಪ್ ಪ್ರಕರಣ: ಸಂತ್ರಸ್ತೆಯ ಪತ್ರ ಬಂದಿಲ್ಲ-ಸಿಜೆಐ; ವರದಿ ಕೇಳಿದ ಸುಪ್ರೀಂ
ಉನ್ನಾವ್ ರೇಪ್ ಪ್ರಕರಣದ ಸಂತ್ರಸ್ತೆ ಸಿಜೆಐ ಗೆ ಬರೆದ ಪತ್ರ ಅವರಿಗೇಕೆ ತಲುಪಿಲ್ಲ ಎಂಬ ಬಗ್ಗೆ ತನ್ನ ಪ್ರಧಾನ ಕಾರ್ಯದರ್ಶಿಯಿಂದ ಸುಪ್ರೀಂ ಕೋರ್ಟ್ ವರದಿ ಕೇಳಿದೆ.

Published On :
ನವದೆಹಲಿ: ಉನ್ನಾವ್ ರೇಪ್ ಪ್ರಕರಣದ ಸಂತ್ರಸ್ತೆ ಸಿಜೆಐ ಗೆ ಬರೆದ ಪತ್ರ ಅವರಿಗೇಕೆ ತಲುಪಿಲ್ಲ ಎಂಬ ಬಗ್ಗೆ ತನ್ನ ಪ್ರಧಾನ ಕಾರ್ಯದರ್ಶಿಯಿಂದ ಸುಪ್ರೀಂ ಕೋರ್ಟ್ ವರದಿ ಕೇಳಿದೆ.
ತನಗೆ ಜೀವಬೆದರಿಕೆ ಇದೆ ಎಂದು ಸಂತ್ರಸ್ತೆ ಬರೆದಿದ್ದ ಪತ್ರ ಇನ್ನೂ ತಮಗೆ ತಲುಪಿಲ್ಲ. ಆದರೆ ಮಾಧ್ಯಮಗಳಲ್ಲಿ ನಾನು ಪತ್ರ ಓದಿದ್ದೇನೆ ಎಂದು ವರದಿಯಾಗುತ್ತಿದೆ ಎಂದು ಸಿಜೆಐ ರಂಜನ್ ಗೊಗೋಯ್ ಹೇಳಿದ್ದಾರೆ.
ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ಅಮಿಕಸ್ ಕ್ಯೂರಿಯಾಗಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ವಕೀಲ ವಿ.ಗಿರಿ ಉನ್ನಾವ್ ರೇಪ್ ಪ್ರಕರಣದ ಬಗ್ಗೆ ಶೀಘ್ರ ವಿಚಾರಣೆ ನಡೆಯಬೇಕೆಂದು ಕೋರಿದಾಗ ಸಿಜೆಐ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
ಇದೇ ವೇಳೆ ಕೋರ್ಟ್ ಉನ್ನಾವ್ ರೇಪ್ ಪ್ರಕರಣದ ಸಂತ್ರಸ್ತೆ ಅಪಘಾತಕ್ಕೀಡಾಗಿರುವುದರ ಬಗ್ಗೆ ವರದಿ ಸಲ್ಲಿಸುವಂತೆ ಉತ್ತರ ಪ್ರದೇಶ ಅಧಿಕಾರಿಗಳಿಗೆ ಸೂಚನೆ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಸುಪ್ರೀಂ ಕೋರ್ಟ್letterಪತ್ರವರದಿUnnao rape caseCJI Ranjan GogoiSupreme court reportಉನ್ನಾವ್ ರೇಪ್ ಪ್ರಕರಣಸಿಜೆಐ ರಂಜನ್ ಗೊಗೋಯ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


