ಗೋಲ್ ಗುಂಬಜ್ ಸೇರಿ ಐತಿಹಾಸಿಕ ಸ್ಮಾರಕಗಳಿಗೆ ಭೇಟಿ ನೀಡುವ ಸಮಯ ವಿಸ್ತರಣೆ: ಪ್ರಧಾನಿ ಶ್ಲಾಘನೆ
ಜಾಗತಿಕ ಗಮನ ಸೆಳೆದಿರುವ ಹತ್ತು ಐತಿಹಾಸಿಕ ಸ್ಮಾರಕಗಳಿಗೆ ಭೇಟಿ ನೀಡುವ ಸಮಯವನ್ನು ವಿಸ್ತರಿಸಿರುವ ಪ್ರವಾಸೋದ್ಯಮ ಸಚಿವಾಲಯದ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

Published On :
ನವದೆಹಲಿ: ಜಾಗತಿಕ ಗಮನ ಸೆಳೆದಿರುವ ಹತ್ತು ಐತಿಹಾಸಿಕ ಸ್ಮಾರಕಗಳಿಗೆ ಭೇಟಿ ನೀಡುವ ಸಮಯವನ್ನು ವಿಸ್ತರಿಸಿರುವ ಪ್ರವಾಸೋದ್ಯಮ ಸಚಿವಾಲಯದ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸಮಯ ಹೆಚ್ಚಿಸಿರುವುದರಿಂದ ಹೆಚ್ಚು ಹೆಚ್ಚು ಜನ ಈ ಸ್ಥಳಗಳಿಗೆ ಭೇಟಿ ನೀಡಲು ಹಾಗೂ ಭಾರತದ ಭವ್ಯ ಇತಿಹಾಸ ಅರಿಯಲು ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.
ರಾಜ್ಯದ ವಿಜಯಪುರದ ಐತಿಹಾಸಿಕ ಗೋಲ್ ಗುಂಬ ಸೇರಿ ಹತ್ತು ಸ್ಮಾರಕಗಳನ್ನು ಸಾರ್ವಜನಿಕರು ವೀಕ್ಷಿಸಲು ರಾತ್ರಿ 9 ಗಂಟೆ ತನಕ ಸಮಯ ವಿಸ್ತರಿಸಿ ಪ್ರವಾಸೋದ್ಯಮ ಸಚಿವಾಲಯ ನಿನ್ನೆ ಆದೇಶ ಹೊರಡಿಸಿತ್ತು.
ದೆಹಲಿಯ ಸಫ್ತಾರ್ ಜಂಗ್ ಹಾಗೂ ಹುಮಾಯೂನ್ ಗುಮ್ಮಟಗಳು, ಒಡಿಶಾದ ರಾಜ ರಾಣಿ ದೇವಾಲು ಸಂಕೀರ್ಣ, ಮಧ್ಯ ಪ್ರದೇಶದ ದುಲಾದೇವ್ ಮಂದಿರ, ಹರಿಯಾಣದ ಶೇಕ್ ಚಿಲ್ಲಿ ಗುಮ್ಮಟ, ಮಹಾರಾಷ್ಟ್ರದ ಮಾರ್ಕಾಂಡ ದೇವಾಲಯ ಸಮೂಹ, ಗುಜರಾತ್‌ನ ರಾಣಿ-ಕಿ-ವಾವ್ ಹಾಗೂ ಉತ್ತರ ಪ್ರದೇಶದ ಮನ್ ಮಹಲ್ ವೈದ್ ಶಾಲಾ ಸ್ವಾರಕಗಳನ್ನು ಬೆಳಗ್ಗೆ 9 ರಿಂದ ಸಂಜೆ 5.30ರವರೆಗೆ ಮಾತ್ರ ವೀಕ್ಷಣೆಗೆ ಅವಕಾಶವಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


