ದೇಶ

ವೈಕೋ ಸೇರಿ ತಮಿಳುನಾಡಿನ ಐವರು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ

ನೂತನ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಎಂಡಿಎಂಕೆ ಸಂಸ್ಥಾಪಕ ವೈಕೋ ಹಾಗೂ ಇತರೆ ನಾಲ್ವರು ಗುರುವಾರ ಮೇಲ್ಮನೆ ಸದಸ್ಯರಾಗಿ....

ವೈಕೋ ಸೇರಿ ತಮಿಳುನಾಡಿನ ಐವರು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ
ವೈಕೋ
Published On :
ನವದೆಹಲಿ: ನೂತನ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಎಂಡಿಎಂಕೆ ಸಂಸ್ಥಾಪಕ ವೈಕೋ ಹಾಗೂ ಇತರೆ ನಾಲ್ವರು ಗುರುವಾರ ಮೇಲ್ಮನೆ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು.
ವೈಕೋ, ಪಿಎಂಕೆ ನಾಯಕ ಅನ್ಬುಮಣಿ ರಾಮದಾಸ್, ಎಐಎಡಿಎಂಕೆಯ ಇಬ್ಬರು ಹಾಗೂ ಡಿಎಂಕೆಯ ಇಬ್ಬರು ಸದಸ್ಯರು ಇತ್ತೀಚಿಗೆ ತಮಿಳುನಾಡಿನಿಂದ ರಾಜ್ಯಸಭೆ ಆಯ್ಕೆಯಾಗಿದ್ದರು.
ತಮಿಳುನಾಡಿನ ಆರು ನೂತನ ಸದಸ್ಯರ ಪೈಕಿ ಐವರಿಗೆ ರಾಜ್ಯಸಭಾ ಅಧ್ಯಕ್ಷೆ ಎಂ ವೆಂಕಯ್ಯ ನಾಯ್ಡು ಅವರು ಇಂದು ಪ್ರಮಾಣವಚನ ಬೋಧಿಸಿದರು. ರಾಮದಾಸ್ ಅವರು ಇಂದು ಪ್ರಮಾಣವಚನ ಸ್ವೀಕರಿಸಲಿಲ್ಲ.
ಆರು ನೂತನ ಸದಸ್ಯರ ಆಯ್ಕೆಯ ನಂತರ ರಾಜ್ಯಸಭೆಯಲ್ಲಿ ಎಐಎಡಿಎಂಕೆಯ 10ಕ್ಕೆ ಹಾಗೂ ಡಿಎಂಕೆ ಐವರು ಸದಸ್ಯರನ್ನು ಹೊಂದಿದೆ. ಎಂಡಿಎಂಕೆ ಹಾಗೂ ಪಿಎಂಕೆ ರಾಜ್ಯಸಭೆಯಲ್ಲಿ ತಲಾ ಒಂದು ಸದಸ್ಯರನ್ನು ಹೊಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.