'ರಾಜೀವ್ ಗಾಂಧಿ 2 ನೇ ಪ್ರಮುಖ ಕರ ಸೇವಕ'
ಬಾಬ್ರಿ ಮಸೀದಿಯನ್ನು ಉಳಿಸುವುದಕ್ಕೆ ರಾಜೀವ್ ಗಾಂಧಿ, ವಿ.ಪಿ ಸಿಂಗ್, ಪಿ.ವಿ ನರಸಿಂಹ ರಾವ್ ಸರ್ಕಾರಕ್ಕೆ ಹಲವು ಅವಕಾಶಗಳಿದ್ದರೂ ಸಹ ಅದನ್ನು ಯಾರೊಬ್ಬರೂ ಬಳಸಿಕೊಳ್ಳಲಿಲ್ಲ ಎಂದು ಮಾಜಿ ಗೃಹ ಕಾರ್ಯದರ್ಶಿ
Published On :
ನವದೆಹಲಿ: ಬಾಬ್ರಿ ಮಸೀದಿಯನ್ನು ಉಳಿಸುವುದಕ್ಕೆ ರಾಜೀವ್ ಗಾಂಧಿ, ವಿ.ಪಿ ಸಿಂಗ್, ಪಿ.ವಿ ನರಸಿಂಹ ರಾವ್ ಸರ್ಕಾರಕ್ಕೆ ಹಲವು ಅವಕಾಶಗಳಿದ್ದರೂ ಸಹ ಅದನ್ನು ಯಾರೊಬ್ಬರೂ ಬಳಸಿಕೊಳ್ಳಲಿಲ್ಲ ಎಂದು ಮಾಜಿ ಗೃಹ ಕಾರ್ಯದರ್ಶಿ ಮಾಧವ್ ಗಾಡ್ಬೋಲ್ ಹೇಳಿದ್ದಾರೆ.
ಮಾಧವ್ ಗಾಡ್ಬೋಲ್ ಅವರ The Babri Masjid Ram Mandir Dilemma: An Acid Test for India's Constitution ಪುಸ್ತಕ ಬಿಡುಗಡೆಗೆ ಸಿದ್ಧವಾಗಿದ್ದು, ಈ ಹಿನ್ನೆಲೆಯಲ್ಲಿ ನೀಡಿರುವ ಸಂದರ್ಶನದಲ್ಲಿ ಗಾಡ್ಬೋಲ್ ಹಲವು ಸಂಗತಿಗಳ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದಾರೆ.
ಬಾಬ್ರಿ ಮಸೀದಿ ಧ್ವಂಸಗೊಂಡ ಅವಧಿಯಲ್ಲಿ ಗಾಡ್ಬೋಲ್ ಗೃಹ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜೀವ್ ಗಾಂಧಿ ನೇತೃತ್ವದ ಸರ್ಕಾರದಿಂದ ಹಿಡಿದು ಮುಂದೆ ಬಂದ ಯಾವುದೇ ಸರ್ಕಾರಗಳು ಸಹ ಬಾಬ್ರಿ ಮಸೀದಿ-ರಾಮ ಜನ್ಮಭೂಮಿ ಬಗ್ಗೆ ಗಮನ ಹರಿಸಿಲ್ಲ.
ರಾಜೀವ್ ಗಾಂಧಿ, ವಿ.ಪಿ ಸಿಂಗ್, ಪಿ.ವಿ ನರಸಿಂಹ ರಾವ್ ಸರ್ಕಾರಗಳಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಹಲವಾರು ಸಲಹೆಗಳು ಬಂದಿದ್ದವು ಆದರೆ ಯಾವ ಸರ್ಕಾರವೂ ಅದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ, ಅಚ್ಚರಿಯೆಂದರೆ ರಾಜೀವ್ ಗಾಂಧಿ ಸಹ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿಲ್ಲ.
1949 ರ ಡಿ.22 ರಂದು ಬಾಬ್ರಿ ಮಸೀದಿಯಲ್ಲಿ ರಾಮನ ವಿಗ್ರಹ ಸ್ಥಾಪನೆಗೆ ಫೈಜಾಬಾದ್ ನ ಜಿಲ್ಲಾ ನ್ಯಾಯಾಧೀಶ ನಾಯರ್ ಉತ್ತೇಜಿಸಿದ್ದರು. ಈ ವ್ಯಕ್ತಿಯ ಬಳಿಕ ರಾಜೀವ್ ಗಾಂಧಿ 2 ನೇ ಪ್ರಮುಖ ಕರ ಸೇವಕ ಎಂಬುದನ್ನು ನಾನು ಯಾವುದೇ ಹಿಂಜರಿಕೆ ಇಲ್ಲದೇ ಹೇಳುತ್ತೇನೆ ಎಂದು ಮಾಧವ್ ಗಾಡ್ಬೋಲ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Rajiv Gandhiರಾಜೀವ್ ಗಾಂಧಿBabri Masjidಬಾಬ್ರಿ ಮಸೀದಿEx-Home Secretary Godboleಮಾಜಿ ಗೃಹ ಕಾರ್ಯದರ್ಶಿ ಗಾಡ್ಬೋಲ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

