ನಾನು ರಾಜಕೀಯದಲ್ಲಿರಬೇಕೆಂದು ನೆಲ್ಸನ್ ಅಂಕಲ್ ಹೇಳಿದ್ದರು- ಪ್ರಿಯಾಂಕಾ
ದಕ್ಷಿಣ ಆಫ್ರಿಕಾದ ಗಾಂಧಿ ನೆಲ್ಸನ್ ಮಂಡಲೇ ಅವರೇ ನನಗೆ ಯಾವಾಗಲೂ ಸ್ಪೂರ್ತಿ ಹಾಗೂ ಮಾರ್ಗದರ್ಶಿಯಾಗಿರುತ್ತಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.

Published On :
ನವದೆಹಲಿ:ದಕ್ಷಿಣ ಆಫ್ರಿಕಾದ ಗಾಂಧಿ ನೆಲ್ಸನ್ ಮಂಡಲೇ ಅವರೇ ನನಗೆ ಯಾವಾಗಲೂ ಸ್ಪೂರ್ತಿ ಹಾಗೂ ಮಾರ್ಗದರ್ಶಿಯಾಗಿರುತ್ತಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ಆಫ್ರಿಕಾದ ಗಾಂಧಿ ಎಂದೇ ಕರೆಯಲ್ಪಡುವ ನೆಲ್ಸನ್ ಮಂಡೇಲಾರ 101ನೇ ಜಯಂತಿಯಂದು ಪ್ರಿಯಾಂಕಾ ಗಾಂಧಿ ನೆಲ್ಸನ್ ಮಂಡೇಲಾ ಜೊತೆಗಿರುವ ಪೋಟೋವೊಂದನ್ನು ತಮ್ಮ ಟ್ವೀಟರ್ ನಲ್ಲಿ ಹಂಚಿಕೊಳ್ಳುವ ಮೂಲಕ ಸ್ಮರಿಸಿದ್ದಾರೆ.
ಇಡೀ ಜಗತ್ತು ನೆಲ್ಸನ್ ಮಂಡೇಲಾ ಅವರಂತಹ ವ್ಯಕ್ತಿಗಳನ್ನು ಕಳೆದುಕೊಂಡಿದೆ. ಅವರ ಜೀವನವು ಸತ್ಯ, ಪ್ರೀತಿ ಮತ್ತು ಸ್ವಾತಂತ್ರ್ಯಕ್ಕೆ ಸಾಕ್ಷಿಯಾಗಿದೆ. ನನಗೆ ಅವರು ನೆಲ್ಸನ್ ಅಂಕಲ್ (ನಾನು ರಾಜಕೀಯದಲ್ಲಿರಬೇಕೆಂದು ಅವರೊಮ್ಮೆ ನನಗೆ ಹೇಳಿದ್ದರು. ಅವರು ಯಾವಾಗಲೂ ನನಗೆ ಯಾವಾಗಲೂ ಸ್ಪೂರ್ತಿ ಹಾಗೂ ಮಾರ್ಗದರ್ಶಕರಾಗಿರುತ್ತಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಜನವರಿ ತಿಂಗಳಲ್ಲಿ ಉತ್ತರ ಪ್ರದೇಶ ಪೂರ್ವ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸುವ ಮೂಲಕ ಪ್ರಿಯಾಂಕಾ ಗಾಂಧಿ ಈ ಬಗ್ಗೆ ಇದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Congressಕಾಂಗ್ರೆಸ್New DelhiNelson Mandelaನೆಲ್ಸನ್ ಮಂಡೇಲಾಪ್ರಿಯಾಂಕಾ ಗಾಂಧಿ ವಾದ್ರಾPriyanka Gandhi Vadra ನವ ದೆಹಲಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


