2023 ಏಪ್ರಿಲ್ ನಲ್ಲಿ ಭಾರತೀಯ ಸೇನೆಯ ಬತ್ತಳಿಕೆಗೆ ರಷ್ಯಾದ ಅತ್ಯಂತ ವಿಧ್ವಂಸಕ S-400 ಕ್ಷಿಪಣಿ ವ್ಯವಸ್ಥೆ!
ರಷ್ಯಾ ಸೇನೆಯ ಅತ್ಯಂತ ವಿಧ್ವಂಸಕ ಕ್ಷಿಪಣಿ ವ್ಯವಸ್ಥೆ ಎಂದೇ ಕರೆಯಲಾಗುವ ಎಸ್-400 ಟ್ರಯಂಫ್ ಕ್ಷಿಪಣಿ ವ್ಯವಸ್ಥೆ 2023ರ ಏಪ್ರಿಲ್ ನಲ್ಲಿ ಭಾರತೀಯ ಸೇನೆಯ ಬತ್ತಳಿಕೆ ಸೇರಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Published On :
ನವದೆಹಲಿ: ರಷ್ಯಾ ಸೇನೆಯ ಅತ್ಯಂತ ವಿಧ್ವಂಸಕ ಕ್ಷಿಪಣಿ ವ್ಯವಸ್ಥೆ ಎಂದೇ ಕರೆಯಲಾಗುವ ಎಸ್-400 ಟ್ರಯಂಫ್ ಕ್ಷಿಪಣಿ ವ್ಯವಸ್ಥೆ 2023ರ ಏಪ್ರಿಲ್ ನಲ್ಲಿ ಭಾರತೀಯ ಸೇನೆಯ ಬತ್ತಳಿಕೆ ಸೇರಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಗೃಹ ಸಚಿವಾಲಯದ ಕಾರ್ಯದರ್ಶಿ ಶ್ರೀಪಾದ್ ನಾಯಕ್ ಅವರು, ಈ ಕುರಿತಂತೆ ಬುಧವಾರ ಲೋಕಸಭೆಗೆ ಮಾಹಿತಿ ನೀಡಿದರು. ರಷ್ಯಾ ಮತ್ತ ಭಾರತದ ನಡುವೆ ಏರ್ಪಟ್ಟಿರುವ ಒಪ್ಪಂದದ ಅನ್ವಯ 2023ರ ಏಪ್ರಿಲ್ ವೇಳೆಗೆ ಮೊದಲ ಹಂತದ ಎಸ್-400 ಟ್ರಯಂಫ್ ಕ್ಷಿಪಣಿ ವ್ಯವಸ್ಥೆ ಭಾರತದ ಕೈ ಸೇರಲಿದೆ. 2018ರ ಅಕ್ಟೋಬರ್ 5ರಂದು ಭಾರತ ಮತ್ತು ರಷ್ಯಾ ಈ ಕುರಿತ ಒಪ್ಪಂದಕ್ಕೆ ಸಹಿ ಹಾಕಿತ್ತು. ಈ ಒಪ್ಪಂದ ಸುಮಾರು 5.43 ಬಿಲಿಯನ್ ಡಾಲರ್ ಮೌಲ್ಯದ ಬೃಹತ್ ಒಪ್ಪಂದವಾಗಿದ್ದು, ಭಾರತ ಐದು S-400 ಕ್ಷಿಪಣಿ ವ್ಯವಸ್ಥೆ ಖರೀದಿಯ ಒಪ್ಪಂದ ಪತ್ರಗಳಿಗೆ ಸಹಿ ಹಾಕಿದೆ ಎಂದು ಹೇಳಿದರು.
ಇನ್ನು ಭಾರತ ಮತ್ತು ರಷ್ಯಾ ನಡುವಿನ ಬೃಹತ್ ರಕ್ಷಣಾ ಒಪ್ಪಂದಕ್ಕೆ ಈ ಹಿಂದೆ ಅಮೆರಿಕ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ರಷ್ಯಾದೊಂದಿಗಿನ ಒಪ್ಪಂದ ರದ್ದು ಮಾಡದಿದ್ದರೆ ಭಾರತದ ವಿರುದ್ಧ ನಿರ್ಬಂಧ ಹೇರುವ ಕುರಿತೂ ಅಮೆರಿಕ ಎಚ್ಚರಿಕೆ ನೀಡಿತ್ತು. ಆದರೆ ಅಮೆರಿಕದ ಬೆದರಿಕೆಗೆ ಜಗ್ಗದ ಭಾರತ ತನ್ನ ರಾಜತಾಂತ್ರಿಕ ನಡೆ ಮೂಲಕ ಅಮೆರಿಕವನ್ನು ಸಮಾಧಾನಿಸಿತ್ತು.
ಎಸ್-400 ಟ್ರಯುಂಫ್: ಏಕಕಾಲಕ್ಕೆ 72 ಕ್ಷಿಪಣಿ ಸಿಡಿಸುವ ಸಾಮರ್ಥ್ಯ, ಒಂದೇ ಬಾರಿಗೆ 36 ಟಾರ್ಗೆಟ್ ನಾಶ
ಇನ್ನು ರಷ್ಯಾದಿಂದ ಭಾರತ ಖರೀದಿಸುತ್ತಿರುವ ಎಸ್-400 ಟ್ರಯುಂಫ್ ಕ್ಷಿಪಣಿ ವ್ಯವಸ್ಥೆ, ಅತ್ಯಂತ ವಿಧ್ವಂಸಕವಾಗಿದ್ದು, ತನ್ನ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಏಕಕಾಲಕ್ಕೆ 72 ಕ್ಷಿಪಣಿ ಸಿಡಿಸುವ ಸಾಮರ್ಥ್ಯ,ಒಂದೇ ಬಾರಿಗೆ 36 ಟಾರ್ಗೆಟ್ ಗಳನ್ನು ನಾಶ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ದೀರ್ಘ ಮತ್ತು ಮಧ್ಯಮ ಶ್ರೇಣಿಯ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ ವಾಯುಪಡೆಗೆ ಹೆಚ್ಚಿನ ಪ್ರಮಾಣದಲ್ಲಿ ಅಗತ್ಯವಿದ್ದು, ನಿಗೂಢ ವಿಮಾನ ಮತ್ತಿತರ ಯಾವುದೇ ರೀತಿಯ ವೈಮಾನಿಕ ದಾಳಿಗಳನ್ನು ನಾಶಪಡಿಸುವಂತೆ ಈ ಕ್ಷಿಪಣಿ ವ್ಯವಸ್ಥೆಯನ್ನು ಅಭಿವೃದ್ದಿಪಡಿಸಲಾಗಿರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವದೆಹಲಿNew DelhiIndian Armyರಷ್ಯಾRussiaDefenceರಕ್ಷಣಾಭಾರತೀಯ ಸೇನೆNDA govtಎನ್ಡಿಎ ಸರ್ಕಾರS-400 systemಎಸ್ -400 ವ್ಯವಸ್ಥೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


