ಭ್ರಷ್ಟಾಚಾರ ಆರೋಪ: ಸ್ವಿಸ್ ಮೂಲದ ಪಿಲಾಟಸ್ ವಿಮಾನ ಸಂಸ್ಥೆ ಮೇಲೆ ನಿಷೇಧ ಹೇರಿದ ಭಾರತ
ಪ್ರಮುಖ ಬೆಳವಣಿಗೆಯಲ್ಲಿ ಭಾರತೀಯ ರಕ್ಷಣಾ ಸಚಿವಾಲಯ ಸ್ವಿಸ್ ಮೂಲದ ಪಿಲಾಟಸ್ ವಿಮಾನ ಸಂಸ್ಥೆ ಮೇಲೆ ನಿಷೇಧ ಹೇರಿದೆ ಎಂದು ತಿಳಿದುಬಂದಿದೆ.

Published On :
ನವದೆಹಲಿ: ಪ್ರಮುಖ ಬೆಳವಣಿಗೆಯಲ್ಲಿ ಭಾರತೀಯ ರಕ್ಷಣಾ ಸಚಿವಾಲಯ ಸ್ವಿಸ್ ಮೂಲದ ಪಿಲಾಟಸ್ ವಿಮಾನ ಸಂಸ್ಥೆ ಮೇಲೆ ನಿಷೇಧ ಹೇರಿದೆ ಎಂದು ತಿಳಿದುಬಂದಿದೆ.
ಭಾರತೀಯ ವಾಯು ಸೇನೆ ಸೇರಿದಂತೆ ಭಾರತಕ್ಕೆ ತರಬೇತಿ ವಿಮಾನಗಳ ಮಾರಾಟ ಮಾಡುತ್ತಿದ್ದ ಸ್ವಿಸ್ ಮೂಲದ ಪಿಲಾಟಸ್ ವಿಮಾನ ಸಂಸ್ಥೆ ಮೇಲೆ ಭಾರತೀಯ ರಕ್ಷಣಾ ಸಚಿವಾಲಯ ಒಂದು ವರ್ಷಗಳ ಕಾಲ ನಿಷೇಧ ಹೇರಿದೆ. ಪಿಲಾಟಸ್ ವಿಮಾನ ಸಂಸ್ಛೆ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರದ ಆರೋಪವನ್ನು ಭಾರತ ಗಂಭೀರವಾಗಿ ಪರಿಗಣಿಸಿದ್ದು, ಇದೇ ಕಾರಣಕ್ಕೆ ಆ ಸಂಸ್ಥೆ ವಿರುದ್ಧ ನಿಷೇಧ ಜಾರಿ ಮಾಡಿದೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಕೇಂದ್ರೀಯ ತನಿಖಾ ದಳ (ಸಿಬಿಐ) ಪಿಲಾಟಸ್ ವಿಮಾನ ಸಂಸ್ಛೆಯ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರ ಆರೋಪವನ್ನು ತನಿಖೆ ನಡೆಸುತ್ತಿದ್ದು, 2012ರಲ್ಲಿ ಭಾರತಕ್ಕೆ ತರಬೇತಿ ವಿಮಾನ ನೀಡುವ ಒಪ್ಪಂದ ಮಾಡಿಕೊಳ್ಳಲು ಆ ಸಂಸ್ಥೆಯ ಭಾರತೀಯ ಅಧಿಕಾರಿಗಳಿಗೆ ಲಂಚ ನೀಡಿತ್ತು ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಹೀಗಾಗಿ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ರಕ್ಷಣಾ ಸಚಿವಾಲಯ ಪಿಲಾಟಸ್ ವಿಮಾನ ಸಂಸ್ಥೆ ಮೇಲೆ ಒಂದು ವರ್ಷಗಳ ಕಾಲ ನಿಷೇಧ ಹೇರಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವದೆಹಲಿNew Delhidefence ministryNDA governmentರಕ್ಷಣಾ ಸಚಿವಾಲಯಎನ್ ಡಿಎ ಸರ್ಕಾರPilatus Aircraft Ltdಪಿಲಾಟಸ್ ವಿಮಾನಯಾನ ಸಂಸ್ಥೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


