ಕರ್ತಾರ್ ಪುರ ಮಾತುಕತೆ ದಿನವೇ ಸಿದು ರಾಜೀನಾಮೆ; ಸಿಖ್ಖರ ಖಂಡನೆ
ಕರ್ತಾರ್ ಪುರ ಕಾರಿಡಾರ್ ಮಾತುಕತೆಯ ದಿನವೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ವಿರುದ್ಧ ದೆಹಲಿ ಶಾಸಕ ಹಾಗೂ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ಮುಖಂಡ ಮಣಿಂದರ್ ಸಿಂಗ್ ಸಿರ್ಸಾ ಕಿಡಿಕಾರಿದ್ದಾರೆ.

Published On :
ನವದೆಹಲಿ: ಕರ್ತಾರ್ ಪುರ ಕಾರಿಡಾರ್ ಮಾತುಕತೆಯ ದಿನವೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ವಿರುದ್ಧ ದೆಹಲಿ ಶಾಸಕ ಹಾಗೂ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ಮುಖಂಡ ಮಣಿಂದರ್ ಸಿಂಗ್ ಸಿರ್ಸಾ ಕಿಡಿಕಾರಿದ್ದಾರೆ.
ಟ್ವಿಟರ್ ನ ವಿಡಿಯೋ ಸಂದೇಶದಲ್ಲಿ ಅವರು, ರಾಜೀನಾಮೆ ನೀಡಲು ಇಂದಿನ ದಿನವನ್ನೇ ಏಕೆ ಆಯ್ಕೆ ಮಾಡಿಕೊಳ್ಳಬೇಕಿತ್ತು. ಇಂದು ಕೆಲಸದ ದಿನವಲ್ಲ, ಬದಲಿಗೆ ರಜಾದಿನ. ಅವರು ದೇಶದ ಗಮನವನ್ನು ಕರ್ತಾರ್ ಪುರ ಮಾತುಕತೆಯಿಂದ ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಿದು ಅವರು ಕರ್ತಾರ್ ಪುರ ಕಾಡಿಡಾರ್ ಕುರಿತು ಭಾರತ-ಪಾಕ್ ನಾಯಕರು ಮಾತುಕತೆಯಲ್ಲಿ ತೊಡಗಿರುವಾಗಲೇ ರಾಜೀನಾಮೆ ಪ್ರಕಟಿಸಿದ್ದಾರೆ. ಇದು ದೇಶದ ಜನರನ್ನು ಇತರೆಡೆಗೆ ಸೆಳೆಯುವ ಸಂಚು. ಅವರು ಮತ್ತೊಮ್ಮೆ ಸಿಖ್ಖರ ವಿರುದ್ಧ ನಿಲುವು ಪ್ರಕಟಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Pakistanಪಾಕಿಸ್ತಾನಸಿಖ್ ಸಮುದಾಯSikh communityಕರ್ತಾರ್ ಪುರ ಕಾರಿಡಾರ್Kartarpur corridorSidhu\'s resignationಸಿಧು ರಾಜೀನಾಮೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


