ದೇಶ

ಲಾಕಪ್ ಡೆತ್‌ಗೆ ಸಾಕ್ಷಿಯಾಗ್ತಾಳೆ ಅಂತಾ ಮಹಿಳೆ ಮೇಲೆ ಪೊಲೀಸರಿಂದಲೇ ಗ್ಯಾಂಗ್ ರೇಪ್!

ಲಾಕಪ್ ಡೆತ್‌ಗೆ ಸಾಕ್ಷಿಯಾಗ್ತಾಳೆ ಅಂತ ಹೆದರಿದ ಪೊಲೀಸರು ಮಹಿಳೆಗೆ ಚನ್ನಾಗಿ ಥಳಿಸಿ, ಉಗುರುಗಳನ್ನು ಕಿತ್ತುಹಾಕಿ ನಂತರ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ರಕ್ಷಕರೆ ಭಕ್ಷಕರಾಗಿ ಹೀನ...

ಲಾಕಪ್ ಡೆತ್‌ಗೆ ಸಾಕ್ಷಿಯಾಗ್ತಾಳೆ ಅಂತಾ ಮಹಿಳೆ ಮೇಲೆ ಪೊಲೀಸರಿಂದಲೇ ಗ್ಯಾಂಗ್ ರೇಪ್!
ಸಂಗ್ರಹ ಚಿತ್ರ
Published On :
ಜೈಪುರ: ಲಾಕಪ್ ಡೆತ್‌ಗೆ ಸಾಕ್ಷಿಯಾಗ್ತಾಳೆ ಅಂತ ಹೆದರಿದ ಪೊಲೀಸರು ಮಹಿಳೆಗೆ ಚನ್ನಾಗಿ ಥಳಿಸಿ, ಉಗುರುಗಳನ್ನು ಕಿತ್ತುಹಾಕಿ ನಂತರ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ರಕ್ಷಕರೆ ಭಕ್ಷಕರಾಗಿ ಹೀನ ಕೃತ್ಯವನ್ನು ಪೊಲೀಸರು ಎಸಗಿದ್ದಾರೆ. 
ರಾಜಸ್ಥಾನದ ಚುರು ಜಿಲ್ಲೆಯಲ್ಲಿ ಜೂನ್ 30ರಂದು ನೇಮಿಚಂದ್ ಎಂಬಾತನನ್ನು ಪೊಲೀಸರು ಬಂಧಿಸಿ ಸರ್ದಾರ್ ಶಹರ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ನಂತರ ಜುಲೈ 3ರಂದು ನೇಮಿಚಂದ್ ಅವರ ತಮ್ಮನ ಹೆಂಡಿತಿಯನ್ನು ಬಂಧಿಸಿ ಕರೆದೊಯ್ದರು. 
ರಸ್ತೆ ಮಧ್ಯೆ ನೇಮಿಚಂದ್ ತಮ್ಮನ ಪತ್ನಿಯ ಹತ್ತಿರ ತನಗೆ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದರು. ನಂತರ ಇಬ್ಬರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಇಬ್ಬರನ್ನು ಚೆನ್ನಾಗಿ ಥಳಿಸಿದ್ದರಿಂದ ಜುಲೈ 6ರಂದು ನೇಮಿಚಂದ್ ಠಾಣೆಯಲ್ಲೇ ಮೃತಪಟ್ಟಿದ್ದರು. 
ಇದೇ ವೇಳೆ ಜೈಲಿನಲ್ಲಿದ್ದ ನೇಮಿಚಂದ್ ನಾದನಿಗೆ ಚೆನ್ನಾಗಿ ಥಳಿಸಿದ್ದಾರೆ. ತೀವ್ರವಾಗಿ ಚಿತ್ರಹಿಂಸೆ ನೀಡಿದ್ದಲ್ಲದೆ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ನಂತರ ಜುಲೈ 7ರಂದು ನೇಮಿಚಂದ್ ಮೃತದೇಹವನ್ನು ತಂದು ತಮ್ಮನಿಗೆ ಅಂತ್ಯಕ್ರಿಯೆ ನಡೆಸುವಂತೆ ಕುಟುಂಬಕ್ಕೆ ಒತ್ತಡ ಹೇರಿದ್ದಾರೆ. 
ಈ ಸಂಬಂಧ ದೂರು ದಾಖಲಿಸಿದ್ದು ಲಾಕಪ್ ಡೆತ್ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಸರ್ದಾರ್ ಶಹರ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸೇರಿ ಆರು ಪೊಲೀಸರ ವಿರುದ್ಧ ದೂರು ದಾಖಲಾಗಿದ್ದು ಅವರನ್ನು ಅಮಾನತು ಮಾಡಲಾಗಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.