ದೇಶ

ಮೆಟ್ರೋ ಪ್ರಯಾಣಿಕರೇ ಎಚ್ಚರ: ರೈಲಿನ ಬಾಗಿಲುಗಳಲ್ಲಿ ಕೈ ಸಿಲುಕಿ ವ್ಯಕ್ತಿ ಸಾವು

ಪಾರ್ಕ್ ಸ್ಟ್ರೀಟ್ ನಿಲ್ದಾಣದಿಂದ ಹೊರಟ ರೈಲೊಂದರ ಎರಡು ಬಾಗಿಲುಗಳ ಮಧ್ಯೆ ಕೈ ಸಿಲುಕಿದ ಪರಿಣಾಮ 56 ವರ್ಷದ ವ್ಯಕ್ತಿಯೊರ್ವರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಮೆಟ್ರೋ ಪ್ರಯಾಣಿಕರೇ ಎಚ್ಚರ: ರೈಲಿನ ಬಾಗಿಲುಗಳಲ್ಲಿ ಕೈ ಸಿಲುಕಿ ವ್ಯಕ್ತಿ ಸಾವು
ಪಾರ್ಕ್ ಸ್ಟ್ರೀಟ್ ನಿಲ್ದಾಣದಲ್ಲಿನ ಜನ
Published On :
ಕೊಲ್ಕತ್ತಾ:  ಪಾರ್ಕ್ ಸ್ಟ್ರೀಟ್ ನಿಲ್ದಾಣದಿಂದ ಹೊರಟ ರೈಲೊಂದರ  ಎರಡು ಬಾಗಿಲುಗಳ ಮಧ್ಯೆ ಕೈ ಸಿಲುಕಿದ ಪರಿಣಾಮ 56 ವರ್ಷದ ವ್ಯಕ್ತಿಯೊರ್ವರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಮೃತನನ್ನು ಸಾಜಲ್ ಕಾಂಜಿಲಾಲ್ ಎಂದು ಗುರುತಿಸಲಾಗಿದೆ. ಈತ ಕೊಲ್ಕತ್ತಾದ ಕಸ್ಬಾ ಪ್ರದೇಶದ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.ನಿನ್ನೆ ಸಂಜೆ 6-42 ರಲ್ಲಿ ಪಾರ್ಕ್ ಸ್ಟ್ರೀಟ್ ನಿಲ್ದಾಣದಲ್ಲಿ ದುರದೃಷ್ಟಕರ ಘಟನೆ ನಡೆದಿದೆ. ಕಬಿ ಸುಬಾಸ್ ರೈಲಿನಲ್ಲಿ ತೆರಳುತ್ತಿದ್ದ ಪ್ರಯಾಣಿಕರೊಬ್ಬರ ಕೈ ಬಾಗಿಲುಗಳ ಮಧ್ಯೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ಮೆಟ್ರೋ ರೈಲ್ವೆ ವಕ್ತಾರರು ಹೇಳಿದ್ದಾರೆ.
ಘಟನೆ ಸಂಭವಿಸಿದ ಕೂಡಲೇ  ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿ, ಪ್ರಯಾಣಿಕರನ್ನು ರೈಲಿನಿಂದ ಇಳಿಸಲಾಯಿತು.ಬಾಗಿಲುಗಳ ಸೆನ್ಸಾರ್ ಗಳು ಏಕೆ ಕಾರ್ಯನಿರ್ವಹಿಸುತ್ತಿರಲಿಲ್ಲ ಎಂಬುದರ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಮೆಟ್ರೋ ಜನರಲ್ ಮ್ಯಾನೇಜರ್ ಪಿಸಿ ಶರ್ಮಾ ಆದೇಶಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇದು ಅತ್ಯಂತ ದುರದೃಷ್ಟಕರ ಘಟನೆ ಎಂದಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ , ಪೊಲೀಸ್ ತನಿಖೆಗೆ ಆದೇಶಿಸಿದ್ದಾರೆ. ಮೃತನ ಕುಟುಂಬಕ್ಕೆ ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡುವುದಾಗಿಯೂ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.