ಸುಪ್ರೀಂ ಕೋರ್ಟ್‌ನಲ್ಲಿ 900 ‘ದೋಷಯುಕ್ತ’ ಪ್ರಕರಣಗಳನ್ನು ಪತ್ತೆ ಮಾಡಿದ ಸಿಜೆಐ ರಂಜನ್ ಗೊಗೋಯ್
ಸುಪ್ರೀಂ ಕೋರ್ಟ್ ನಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆ ತಗ್ಗಿಸುವ ಉದ್ದೇಶದೊಡನೆ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅಗತ್ಯವಿಲ್ಲದ ಪ್ರಕರಣಗಳೆಷ್ಟಿದೆ ಎಂಬುದನ್ನು ಪರಿಶೀಲಿಸಿದ್ದಾರೆ

Published On :
ನವದೆಹಲಿ: ಸುಪ್ರೀಂ ಕೋರ್ಟ್ ನಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆ ತಗ್ಗಿಸುವ ಉದ್ದೇಶದೊಡನೆ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅಗತ್ಯವಿಲ್ಲದ ಪ್ರಕರಣಗಳೆಷ್ಟಿದೆ ಎಂಬುದನ್ನು ಪರಿಶೀಲಿಸಿದ್ದಾರೆ. ಅಲ್ಲದೆ ಸರಿಸುಮಾರು 900 ಪ್ರಕರಣಗಳನ್ನು "ದೋಷಯುಕ್ತ" ಎಂದು ಗುರುತಿಸಿದ್ದಾರೆ ಈ ಪ್ರಕರಣಗಳು ಕಳೆದ ಹತ್ತು ವರ್ಷಗಳಿಂದ ಬಾಕಿ ಉಳಿದಿದ್ದು ವಿಚಾರಣೆಗೆ ಬಂದಿಲ್ಲ ಎಂಬುದನ್ನು ಪತ್ತೆ ಮಾಡಿದ್ದಾರೆ.
ದೋಷಯುಕ್ತ ಪ್ರಕರಣಗಳು ಕೆಲವು ಕಾರ್ಯವಿಧಾನಗಳ ಹಿನ್ನೆಲೆಯಲ್ಲಿ ವಿಚಾರಣೆಗೆ ಸಿದ್ಧವಾಗಿಲ್ಲ, ಅವುಗಳ ವಿಚಾರಣೆಗೆ ಉನ್ನತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ.ಆದರೆ, ಈ ಅರ್ಜಿಗಳನ್ನು ಸಲ್ಲಿಸುವಲ್ಲಿನ ತಪ್ಪುಗಳನ್ನು ಸರಿಪಡಿಸಲು ಭಾಗಿಯಾಗಿರುವ ದಾವೆದಾರರು ಅಥವಾ ಈ ಅರ್ಜಿಗಳಿಗೆ ಸಹಿ ಹಾಕಿದ ವಕೀಲರು ಮುಂದಾಗಿಲ್ಲ.ಹಾಗಾಗಿ ಪ್ರಕ್ರಣದ ವಿಚಾರಣೆಯನ್ನು ಅಕ್ಷರಶಃ ಕೈಬಿಡಲಾಗಿದೆ.
ಜುಲೈ 2019 ರ ಹೊತ್ತಿಗೆ ಸುಪ್ರೀಂ ಕೋರ್ಟ್‌ನಲ್ಲಿ 59,695 ಪ್ರಕರಣಗಳು ಬಾಕಿ ಉಳಿದಿವೆ. ಇವುಗಳಲ್ಲಿ, 13,563 ಅಪೂರ್ಣ ಅಥವಾ ವಿಚಾರಣೆಗೆ ಸಿದ್ದವಾಗಿಲ್ಲದ ಪ್ರಕರಣಗಳು, ಅಂದರೆ ಈ ಪ್ರಕರಣಗಳಲ್ಲಿ ನಿಯಮಿತವಾಗಿ ದೋಷಗಳಿದೆ. ಅದು ನ್ಯಾಯಾಂಗ ಪೀಠದ ಮುಂದೆ ವಿಚಾರಣೆಗೆ ಪಟ್ಟಿ ಮಾಡಲು ಅನರ್ಹವಾಗಿದೆ.
ಅರ್ಜಿದಾರರು ದೋಷಗಳನ್ನು ತೆರವುಗೊಳಿಸದ 900 ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ರಿಜಿಸ್ಟ್ರಿ ಈಗ ಗುರುತಿಸಿದೆ ಮತ್ತು ಈ ಪ್ರಕರಣಗಳು 2010 ರಿಂದಮತ್ತೂ ಕೆಲವು ಅದಕ್ಕೂ ಹಿಂದಿನಿಂದ ಬಾಕಿ ಉಳಿದಿದೆ.ಮೂಲಗಳ ಪ್ರಕಾರ, ಈ ಪ್ರಕರಣಗಳನ್ನು ಎರಡು ಸ್ಥಳಗಳಲ್ಲಿ ಏಕಕಾಲದಲ್ಲಿ ಪಟ್ಟಿ ಮಾಡುವುದನ್ನು ನಿಲ್ಲಿಸಬೇಕಿದೆ. ಇದರರ್ಥ ಕೆಲವು ದಾವೆದಾರರು ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ತೆರಳುತ್ತಾರೆ ಮತ್ತು ನಂತರ ನೋಂದಾವಣೆಯಿಂದ ಸೂಚಿಸಲಾದ ಪ್ರಕರಣದಲ್ಲಿನ ದೋಷಗಳನ್ನು ತೆರವುಗೊಳಿಸದೆ ಸುಮ್ಮನಾಗುತ್ತಾರೆ.ಅತ್ತ ಉನ್ನತ ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇದೆ ಎಂದು ಹೇಳುವ ಮೂಲಕ ವಿಚಾರಣಾ ನ್ಯಾಯಾಲಯದಲ್ಲಿ ಪರಿಹಾರ ಪಡೆಯಲು ಅವರು ಬಯಸುತ್ತಾರೆ.
"ನಾವು ಅಂತಹ ಕೆಲವು ನಿದರ್ಶನಗಳನ್ನು ನೋಡಿದ್ದೇವೆ ಮತ್ತು ಅದರ ಬಗ್ಗೆ ಸಿಜೆಐಗೆ ತಿಳಿಸಿದ್ದೇವೆ. ಅಂತಹ ಪ್ರಕರಣಗಳನ್ನುಪಟ್ಟಿಯಿಂದ ಕೈಬಿಡಲು ನಾವು ನಿರ್ಧರಿಸಿದ್ದೇವೆ, ಇದರಿಂದಾಗಿ ನಮ್ಮ ಬಾಕಿ ಪ್ರಕರಣಗಳ ಸಂಖ್ಯೆಯಲ್ಲಿ ಗಮನಾರ್ಹ ಕಡಿತವಾಗಲಿದೆ.”ಎಂದು ಅಧಿಕಾರಿ ಹೇಳಿದರು. ಸಂಬಂಧಪಟ್ಟ ಎಲ್ಲಾ ದಾವೆದಾರರಿಗೆ ಅರ್ಜಿಯಲ್ಲಿನ ದೋಷಗಳನ್ನು ಸರಿಪಡಿಸಲು ನಾಲ್ಕು ವಾರಗಳ ಕಾಲಾವಕಾಶ ನೀಡಲಾಗಿದೆ, ಅದು ವಿಫಲವಾದರೆ ಪ್ರಕರಣಗಳನ್ನು ವಜಾಗೊಳಿಸಲಾಗುವುದು, ಇದರಿಂದಾಗಿ ಎಲ್ಲಾ ಕಾನೂನು ಪರಿಹಾರಗಳ ಬಾಗಿಲು ಮುಚ್ಚದಂತಾಗಲಿದೆ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


