ದೇಶ

ವಾರಣಾಸಿ: ವಿವಾಹ; ಎಲ್ಲರ ಹುಬ್ಬೇರಿಸಿದ ಸೋದರ ಸಂಬಂಧಿ ಸಹೋದರಿಯರ ವಿವಾಹ

ಉತ್ತರ ಪ್ರದೇಶದ ಪ್ರಧಾನ ಮಂತ್ರಿ ವಾರಣಾಸಿ ಕ್ಷೇತ್ರದಲ್ಲಿ ಎಲ್ಲರೂ ಹುಬ್ಬೇರಿಸುವಂತಹ ಘಟನೆ ...

ವಾರಣಾಸಿ: ವಿವಾಹ; ಎಲ್ಲರ ಹುಬ್ಬೇರಿಸಿದ ಸೋದರ ಸಂಬಂಧಿ ಸಹೋದರಿಯರ ವಿವಾಹ
ಮದುವೆ ಬಳಿಕ ತೆಗೆದ ಜೋಡಿಯ ಫೋಟೋ
Published On :
ವಾರಣಾಸಿ: ಉತ್ತರ ಪ್ರದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವಾರಣಾಸಿ ಕ್ಷೇತ್ರದಲ್ಲಿ ಎಲ್ಲರೂ ಹುಬ್ಬೇರಿಸುವಂತಹ ಘಟನೆ ನಡೆದಿದ್ದು ಇಬ್ಬರು ಸೋದರಸಂಬಂಧಿ ಸಹೋದರಿಯರು ತಮ್ಮ ಕುಟುಂಬದವರ ಆಶಯಕ್ಕೆ ವಿರುದ್ಧವಾಗಿ ವಿವಾಹವಾಗಿದ್ದಾರೆ.
ತಾವು ಮದುವೆಯಾದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಈ ಯುವತಿಯರ ಫೋಟೋಗಳು ವೈರಲ್ ಆಗಿವೆ.
ವಾರಣಾಸಿಯಲ್ಲಿ ಇದು ಬಹುಶಃ ಮೊದಲ ಸಲಿಂಗ ವಿವಾಹವಾಗಿರಬೇಕು. ವಾರಣಾಸಿಯ ರೊಹನಿಯಾ ನಿವಾಸಿಗಳಾಗಿರುವ ಯುವತಿಯರು ನಿನ್ನೆ ಶಿವ ದೇವಸ್ಥಾನಕ್ಕೆ ಹೋಗಿ ತಮ್ಮ ಮದುವೆ ನೆರವೇರಿಸಿಕೊಡುವಂತೆ ಅರ್ಚಕರಲ್ಲಿ ಕೇಳಿಕೊಂಡರು. ಆರಂಭದಲ್ಲಿ ಅರ್ಚಕರು ಒಪ್ಪಲಿಲ್ಲ, ಆಗ ಯುವತಿಯರು ತಮ್ಮ ಮದುವೆಯಾಗದೆ ದೇವಸ್ಥಾನ ಬಿಟ್ಟು ಹೋಗುವುದಿಲ್ಲ ಎಂದು ಹಠ ಹಿಡಿದು ಕುಳಿತರು.
ಜೀನ್ಸ್ ಮತ್ತು ಟಿ ಶರ್ಟ್ ಧರಿಸಿ ತಲೆಗೆ ಕೆಂಪು ಶಾಲು ಹೊದ್ದುಕೊಂಡು ಮದುವೆಯಾದರು. ಮದುವೆಯಾದ ಹೊತ್ತಿಗೆ ದೇವಸ್ಥಾನದಲ್ಲಿ ಬಹಳ ಜನ ಸೇರಿದ್ದರು. ಯಾವುದೇ ಅಹಿತಕರ ಘಟನೆ ನಡೆಯುವ ಮೊದಲು ಜೋಡಿ ದೇವಸ್ಥಾನದಿಂದ ಹೊರಬಂದರು.
ಮದುವೆ ಮಾಡಿಸಿದ್ದಕ್ಕೆ ಕೆಲವರು ಅರ್ಚಕರನ್ನು ಹಿಗ್ಗಾಮುಗ್ಗ ಬೈಯುತ್ತಿದ್ದಾರೆ. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅರ್ಚಕ, ಕಾನ್ಪುರದ ಯುವತಿ ಅಧ್ಯಯನ ಮಾಡಲೆಂದು ವಾರಣಾಸಿಗೆ ಬಂದು ತನ್ನ ಸೋದರ ಸಂಬಂಧಿ ಜೊತೆ ನೆಲೆಸಿದ್ದಳು ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.