ದೇಶ

ನಿರ್ಣಾಯಕ ಘಟ್ಟದಲ್ಲಿ ಕುಲಭೂಷಣ್ ಜಾದವ್ ಪ್ರಕರಣ, ಜುಲೈ 17ಕ್ಕೆ ತೀರ್ಪು!

ಭಾರತ ಮತ್ತು ಪಾಕಿಸ್ತಾನದ ನಡುವೆ ತೀವ್ರ ತಿಕ್ಕಾಟಕ್ಕೆ ಕಾರಣವಾಗಿರುವ ಕುಲಭೂಷಣ್ ಜಾದವ್ ಪ್ರಕರಣದ ತೀರ್ಪು ಇದೇ ಜುಲೈ ತಿಂಗಳ ಅಂತ್ಯದಲ್ಲಿ ಪ್ರಕಟಗೊಳ್ಳುವ ಸಾಧ್ಯತೆ ಇದೆ.

ನಿರ್ಣಾಯಕ ಘಟ್ಟದಲ್ಲಿ ಕುಲಭೂಷಣ್ ಜಾದವ್ ಪ್ರಕರಣ, ಜುಲೈ 17ಕ್ಕೆ ತೀರ್ಪು!
ಸಂಗ್ರಹ ಚಿತ್ರ
Published On :
ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ತೀವ್ರ ತಿಕ್ಕಾಟಕ್ಕೆ ಕಾರಣವಾಗಿರುವ ಕುಲಭೂಷಣ್ ಜಾದವ್ ಪ್ರಕರಣದ ತೀರ್ಪು ಇದೇ ಜುಲೈ ತಿಂಗಳ 17ಕ್ಕೆ ಪ್ರಕಟಗೊಳ್ಳುವ ಸಾಧ್ಯತೆ ಇದೆ.
ಕುಲ್ ಭೂಷಣ್ ಜಾಧವ್ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ತನ್ನ ತೀರ್ಪನ್ನು ಇದೇ ಜುಲೈ 17ಕ್ಕೆ ಪ್ರಕಟಿಸಲಿದೆ ಎಂದು ಮೂಲಗಳು ತಿಳಿಸಿವೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ಗುರುವಾರ, 'ಕುಲಭೂಷಣ್ ಜಾಧವ್ ಪ್ರಕರಣವನ್ನು ಕೆಲವೇ ವಾರಗಳಲ್ಲಿ ಘೋಷಿಸಲಾಗುವುದು. ಪ್ರಕರಣದಲ್ಲಿ ಮೌಖಿಕ ಸಲ್ಲಿಕೆಗಳನ್ನು ಮಾಡಲಾಗಿದೆ. ಈ ತೀರ್ಪನ್ನು ಅಂತಾರಾಷ್ಟ್ರೀಯ ನ್ಯಾಯಾಲಯವು ಘೋಷಿಸಬೇಕಾಗಿದೆ. ದಿನಾಂಕವನ್ನು ಅವರು ನಿಗದಿಪಡಿಸಲಿದ್ದಾರೆ ಎಂದು ಹೇಳಿದರು.
ಇನ್ನು 48 ವರ್ಷದ ಮಾಜಿ ನೌಕಾ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ 2017 ರ ಏಪ್ರಿಲ್ 11 ರಂದು ಗೂಢಚರ್ಯೆ ಮತ್ತು ಭಯೋತ್ಪಾದನೆ ಆರೋಪದ ಮೇಲೆ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು, ಈ ತೀರ್ಪನ್ನು ಪ್ರಶ್ನಿಸಿ ಭಾರತ ಅಂತಾರಾಷ್ಟ್ರೀಯ ಕೋರ್ಟ್ ಗೆ ಮೊರೆಹೋಗಿತ್ತು. ಈ ಪ್ರಕರಣದ ನಾಲ್ಕು ದಿನಗಳ ವಿಚಾರಣೆ ಫೆಬ್ರವರಿ 18 ರಂದು ಹೇಗ್‌ ನ ಐಸಿಜೆ ಕೇಂದ್ರ ಕಚೇರಿಯಲ್ಲಿ ಪ್ರಾರಂಭವಾಯಿತು.  
ಮೇ 18, 2017 ರಂದು, ಐಸಿಜೆ ಯ 10 ಸದಸ್ಯರ ಪೀಠವು ಪ್ರಕರಣವನ್ನು ತೀರ್ಪು ನೀಡುವವರೆಗೂ ಜಾಧವ್ ಅವರನ್ನು ಗಲ್ಲಿಗೇರಿಸದಂತೆ ಪಾಕಿಸ್ತಾನವನ್ನು ನಿರ್ಬಂಧಿಸಿತು. ಈ ವರ್ಷದ ಫೆಬ್ರವರಿಯಲ್ಲಿ ಜಾಧವ್ ಅವರ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಪಾಕಿಸ್ತಾನ ಮಾಡಿದ ಐದು ಮನವಿಗಳನ್ನು ಐಸಿಜೆ ತಿರಸ್ಕರಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.