ನೀವು ಮಾಡಿದ ಧೈರ್ಯ ಕೆಲವರಿಗೆ ಮಾತ್ರ ಇರುತ್ತದೆ: ಅಣ್ಣ ರಾಹುಲ್ ಗಾಂಧಿ ನಿರ್ಧಾರಕ್ಕೆ ತಂಗಿ ಪ್ರಿಯಾಂಕಾ ಪ್ರತಿಕ್ರಿಯೆ
ನಿಮ್ಮಂತೆ ಕೆಲವರಿಗೆ ಮಾತ್ರ ಧೈರ್ಯವಿರುತ್ತದೆ. ನಿಮ್ಮ ನಿರ್ಧಾರಕ್ಕೆ ಅಗಾಧ ಗೌರವ ಎಂದು ತಮ್ಮ ...

Published On :
ನವದೆಹಲಿ: ನಿಮ್ಮಂತಹ ಧೈರ್ಯ ಕೆಲವರಿಗೆ ಮಾತ್ರ ಇರುತ್ತದೆ. ನಿಮ್ಮ ನಿರ್ಧಾರಕ್ಕೆ ಅಗಾಧ ಗೌರವ ಎಂದು ತಮ್ಮ ಪ್ರೀತಿಯ ಅಣ್ಣ ರಾಹುಲ್ ಗಾಂಧಿಗೆ ತಂಗಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
2017ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡಿದ್ದ ರಾಹುಲ್ ಗಾಂಧಿ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ಹೊಣೆಹೊತ್ತು ಕಳೆದ ಮೇ 25ರಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಜೀನಾಮೆ ಸಲ್ಲಿಸಿದ್ದರು. ಈ ವಿಷಯವನ್ನು ನಿನ್ನೆ ಅಧಿಕೃತವಾಗಿ ಪತ್ರದ ಮೂಲಕ ಬಹಿರಂಗವಾಗಿ ಸಾರಿದ್ದಾರೆ.
ಕಾಂಗ್ರೆಸ್ ನ ಭವಿಷ್ಯದ ಬೆಳವಣಿಗೆಗೆ ಈ ಹೊತ್ತಿನಲ್ಲಿ ಹೊಣೆಗಾರಿಕೆ ನಿರ್ಣಾಯಕವಾಗಿರುತ್ತದೆ ಎಂದು ರಾಹುಲ್ ಗಾಂಧಿ ಪತ್ರದಲ್ಲಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ResignರಾಜೀನಾಮೆRahul Gandhiರಾಹುಲ್ ಗಾಂಧಿPresidentPriyanka Gandhi Vadraಅಧ್ಯಕ್ಷ ಹುದ್ದೆಪ್ರಿಯಾಂಕಾ ಗಾಂಧಿ ವಾದ್ರಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


