ದೇಶ

ನಾಚಿಕೆಯಾಗಬೇಕು: ಬಿಜೆಪಿ ಆಯ್ತು, ಇದೀಗ ಕಾಂಗ್ರೆಸ್ ಶಾಸಕನಿಂದ ಅಧಿಕಾರಿ ಮೇಲೆ ಕೆಸರು ಎರಚಿ ಹಲ್ಲೆ, ವಿಡಿಯೋ ವೈರಲ್!

ಸರ್ಕಾರಿ ಅಧಿಕಾರಿ ಮೇಲೆ ಬ್ಯಾಟ್ ನಿಂದ ಹಲ್ಲೆ ಮಾಡಿದ್ದ ಬಿಜೆಪಿ ಸಂಸದನ ಪುತ್ರನ ಮೇಲೆ ಕಠಿಣ ಕ್ರಮಕೈಗೊಳ್ಳಿ ಎಂದು ಪ್ರಧಾನಿ ಮೋದಿಗೆ ಕಾಂಗ್ರೆಸ್ ಆಗ್ರಹಿಸಿತ್ತು.

ನಾಚಿಕೆಯಾಗಬೇಕು: ಬಿಜೆಪಿ ಆಯ್ತು, ಇದೀಗ ಕಾಂಗ್ರೆಸ್ ಶಾಸಕನಿಂದ ಅಧಿಕಾರಿ ಮೇಲೆ ಕೆಸರು ಎರಚಿ ಹಲ್ಲೆ, ವಿಡಿಯೋ ವೈರಲ್!
ನಿತೇಶ್ ರಾಣೆ ಹಲ್ಲೆ ದೃಶ್ಯ
Published On :
ಮುಂಬೈ: ಸರ್ಕಾರಿ ಅಧಿಕಾರಿ ಮೇಲೆ ಬ್ಯಾಟ್ ನಿಂದ ಹಲ್ಲೆ ಮಾಡಿದ್ದ ಬಿಜೆಪಿ ಸಂಸದನ ಪುತ್ರನ ಮೇಲೆ ಕಠಿಣ ಕ್ರಮಕೈಗೊಳ್ಳಿ ಎಂದು ಪ್ರಧಾನಿ ಮೋದಿಗೆ ಕಾಂಗ್ರೆಸ್ ಆಗ್ರಹಿಸಿತ್ತು. ಇದೀಗ ಕಾಂಗ್ರೆಸ್ ಪಕ್ಷದ ಮಾಜಿ ಸಿಎಂ ಪುತ್ರ, ಶಾಸಕನೊಬ್ಬ ಸರ್ಕಾರಿ ಎಂಜಿನಿಯರ್ ಮೇಲೆ ಕೆಸರು ಚೆಲ್ಲಿ ಹಲ್ಲೆ ನಡೆಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. 
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಪುತ್ರ ಕಾಂಗ್ರೆಸ್ ಪಕ್ಷದ ಶಾಸಕ ನಿತೇಶ್ ರಾಣೆ ಎಂಜಿನಿಯರ್ ಮೇಲೆ ಕಾರ್ಯಕರ್ತರೊಂದಿಗೆ ಕೆಸರು ಸುರಿದು ಹಲ್ಲೆ ನಡೆಸಿದ್ದಾರೆ. ಅಲ್ಲದೇ ಸ್ಥಳದಲ್ಲಿದ್ದ ಬ್ರಿಡ್ಜ್ ಗೆ ಕಟ್ಟಿಹಾಕಿದ್ದಾರೆ.
ಮಹಾರಾಷ್ಟ್ರ-ಗೋವಾ ನಡುವಿನ ಕಂಕವ್ಲಿ ಹೆದ್ದಾರಿಯ ರಸ್ತೆ ವೀಕ್ಷಣೆಗೆ ನಿತೇಶ್ ನಾರಾಯಣ್ ರಾಣೆ ತೆರಳಿದ್ದರು. ಈ ವೇಳೆ ರಸ್ತೆ ಗುಂಡಿಗಳನ್ನು ಕಂಡು ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.