ದೇಶ

ರಾಷ್ಟ್ರಪಿತನಿಗೆ ಅಪಮಾನ: ಮಹಾತ್ಮ ಗಾಂಧಿ ಫೋಟೋಗೆ ಗುಂಡಿಕ್ಕಿದ ಹಿಂದೂ ಮಹಾಸಭಾ ನಾಯಕಿ!

ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀ ಅವರನ್ನು ಹತ್ಯೆ ಮಾಡಿದ್ದ ನಾಥುರಾಮ್ ಗೋಡ್ಸೆಗೆ ಮಾಲಾರ್ಪಣೆ ಮಾಡಿ, ಗಾಂಧೀಜಿ ಫೋಟೋಗೆ ಹಿಂದೂ ಮಹಾಸಭಾ ನಾಯಕಿ ಗುಂಡಿಕ್ಕಿರುವ ವಿಡಿಯೋ ವೈರಲ್ ಆಗಿದೆ.

ರಾಷ್ಟ್ರಪಿತನಿಗೆ ಅಪಮಾನ: ಮಹಾತ್ಮ ಗಾಂಧಿ ಫೋಟೋಗೆ ಗುಂಡಿಕ್ಕಿದ ಹಿಂದೂ ಮಹಾಸಭಾ ನಾಯಕಿ!
ಸಂಗ್ರಹ ಚಿತ್ರ
Published On :
ಲಖನೌ: ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀ ಅವರನ್ನು ಹತ್ಯೆ ಮಾಡಿದ್ದ ನಾಥುರಾಮ್ ಗೋಡ್ಸೆಗೆ ಮಾಲಾರ್ಪಣೆ ಮಾಡಿ, ಗಾಂಧೀಜಿ ಫೋಟೋಗೆ ಹಿಂದೂ ಮಹಾಸಭಾ ನಾಯಕಿ ಗುಂಡಿಕ್ಕಿರುವ ವಿಡಿಯೋ ವೈರಲ್ ಆಗಿದೆ.
ಮಹಾತ್ಮಾಗಾಂಧಿ ಅವರ ತ್ಯಾಗಗಳ ನೆನೆದು ಸ್ಮರಣೆ ಕಾರ್ಯ ದೇಶದೆಲ್ಲೆಡೆ ನಡೆಯುತ್ತಿದ್ದರೆ ಇತ್ತ ಅಲಿಗಢದಲ್ಲಿ ಮಾತ್ರ ಗಾಂಧಿಜೀ ಸಾವನ್ನಪ್ಪಿದ ಈ ದಿನವನ್ನು ಹಿಂದೂ ಮಹಾಸಭಾ ಕಾರ್ಯಕರ್ತರು ಶೌರ್ಯ ದಿನವನ್ನಾಗಿ ಆಚರಣೆ ಮಾಡುತ್ತಿದ್ದಾರೆ. ಅಲ್ಲದೆ ಇದೇ ವೇಳೆ ಹಿಂದೂಸಭಾದ ನಾಯಕಿ ಪೂಜಾ ಶಕುನ್ ಪಾಂಡೆ ಗಾಂಧಿಜೀ ಫೋಟೋಗೆ ನಕಲಿ ಗನ್ ನಿಂದ ಶೂಟ್ ಮಾಡುವ ಮೂಲಕ ಅವಮಾನ ಮಾಡಿದ್ದಾರೆ. 
ಬಳಿಕ ಮಾತನಾಡಿದ ಪಾಂಡೆ, ನಾವು ಇಂದು ಹೊಸ ಪರಂಪರೆ ಶುರು ಮಾಡಿದ್ದೇವೆ. ಹೇಗೆ ರಾವಣನನ್ನು ರಾಮ ಸಂಹರಿಸಿದ ಎಂಬುದನ್ನು ಆಚರಿಸುತ್ತೇವೆ. ಹಾಗೇ ಭಾರತವನ್ನು ತುಂಡಾಗಿಸಿದ್ದ ಗಾಂಧಿಜೀ ಕಾರ್ಯ ಏನೆಂಬುದನ್ನು ಜನರಿಗೆ ಅರ್ಥೈಸಲು ಈ ರೀತಿ ಆಚರಣೆ ಮಾಡಿದ್ದೇವೆ ಎಂದರು. 
1948ರ ಜನವರಿ 30ರಂದು ನಾಥುರಾಮ್ ಗೋಡ್ಸೆ ಗಾಂಧಿಜೀ ಅವರಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.