ದೇಶ

ಸರ್ಕಾರ ಭದ್ರತೆ ನೀಡಿದರೆ ನಾನು ದೆಹಲಿ ಬಿಟ್ಟು ಹೋಗುತ್ತೇನೆ ಎಂದಿದ್ದರಂತೆ ಗಾಂಧೀಜಿ!

ದೇಶದ ಪಿತಾಮಹ ಮಹಾತ್ಮಾ ಗಾಂಧಿಯವರು ತಮ್ಮ ಜೀವಕ್ಕೆ ರಕ್ಷಣೆ ನೀಡಿದರೆ ...

ಸರ್ಕಾರ ಭದ್ರತೆ ನೀಡಿದರೆ ನಾನು ದೆಹಲಿ ಬಿಟ್ಟು ಹೋಗುತ್ತೇನೆ ಎಂದಿದ್ದರಂತೆ ಗಾಂಧೀಜಿ!
1920ರಲ್ಲಿ ಚರಕದಿಂದ ನೂಲು ತೆಗೆಯುತ್ತಿರುವ ಮಹಾತ್ಮಾ ಗಾಂಧೀಜಿ
Published On :

ಚೆನ್ನೈ: ದೇಶದ ಪಿತಾಮಹ ಮಹಾತ್ಮಾ ಗಾಂಧಿಯವರು ತಮ್ಮ ಜೀವಕ್ಕೆ ರಕ್ಷಣೆ ನೀಡಿದರೆ ದೆಹಲಿ ಬಿಟ್ಟು ಹೋಗುತ್ತೇನೆ ಎಂದು ಅಧಿಕಾರಿಗಳನ್ನು ಹೆದರಿಸಿದ್ದರಂತೆ. ಸರ್ಕಾರ ನೀಡಿದ್ದ ಭದ್ರತೆಯನ್ನು ಬಳಸಲು ಅವರು ನಿರಾಕರಿಸುತ್ತಿದ್ದರು ಎಂದು ಮಹಾತ್ಮಾ ಗಾಂಧೀಜಿಯವರ ಬಳಿ ಕಾರ್ಯದರ್ಶಿಯಾಗಿದ್ದ ಕಲ್ಯಾಣಮ್ ಬಹಿರಂಗಪಡಿಸಿದ್ದಾರೆ.

96 ವರ್ಷದ ಕಲ್ಯಾಣಮ್, ಗಾಂಧೀಜಿಯವರ ಒಡನಾಡಿಯಾಗಿದ್ದು ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಗಾಂಧೀಜಿಯ ಹತ್ಯೆಯಾಗುವುದಕ್ಕೆ ಕೆಲ ವಾರಗಳ ಹಿಂದೆ ಅವರ ಜೀವಕ್ಕೆ ಬೆದರಿಕೆಯಿಂದ ಎಂದು ಸರ್ಕಾರದಿಂದ ಹಲವು ಬಾರಿ ಎಚ್ಚರಿಕೆ ನೀಡಿದ್ದರಂತೆ. ಆದರೆ ತಮಗೆ ಯಾವುದೇ ಭದ್ರತೆ ಬೇಡ ಎಂದು ಹಠ ಹಿಡಿದಿದ್ದರು ಎಂದು ಕಲ್ಯಾಣಮ್ ಹೇಳುತ್ತಾರೆ.

ಭದ್ರತೆ ಮೇಲೆ ನನಗೆ ನಂಬಿಕೆಯಿಲ್ಲ, ನನ್ನ ಜೀವಕ್ಕೆ ಯಾವುದೇ ರಕ್ಷಣೆ, ಭದ್ರತೆ ಬೇಕಾಗಿಲ್ಲ. ನನಗೆ ಭದ್ರತೆ ಕೊಡಲು ಹೊರಟರೆ ನಾನು ದೆಹಲಿ ಬಿಟ್ಟು ಬೇರೆಲ್ಲಾದರೂ ಹೋಗುತ್ತೇನೆ ಎಂದು ಗಾಂಧೀಜಿ ಹೇಳಿದ್ದರೆಂದು ಕಲ್ಯಾಣಮ್ ನೆನಪು ಮಾಡಿಕೊಳ್ಳುತ್ತಾರೆ. ಒಂದು ವೇಳೆ ಗಾಂಧೀಜಿಯವರು ಹಠ ಮಾಡದೆ ಭದ್ರತೆಗೆ ಒಪ್ಪುತಿದ್ದರೆ ಅವರ ಹತ್ಯೆಯನ್ನು ತಡೆಯಬಹುದಾಗಿತ್ತು ಎನ್ನುತ್ತಾರೆ ಅವರು. ಜನವರಿ 30, 1948 ಗಾಂಧೀಜಿಯವರ ಹತ್ಯೆಯಾದ ದಿನವನ್ನು ಹುತಾತ್ಮರ ದಿನ ಎಂದು ನಾವು ಆಚರಿಸುತ್ತೇವೆ.
 
ಒಮ್ಮೆ ಗಾಂಧಿಯವರು ರೈಲಿನಲ್ಲಿ ಪ್ರಯಾಣಿಸಲು ನಿಲ್ದಾಣದಲ್ಲಿ ಟಿಕೆಟ್ ಪಡೆಯಲು ಮುಂದಾದಾಗ, ನೀವು ದೇಶದ ಮಹಾನ್ ನಾಯಕ, ನಿಮಗೇಕೆ ಟಿಕೆಟ್ ಎಂದು ಸ್ಟೇಷನ್ ಮಾಸ್ಟರ್ ಕೇಳಿದ್ದಕ್ಕೆ ಚೆನ್ನಾಗಿ ಬೈದಿದ್ದರಂತೆ.ಗಣ್ಯರಿಗೆ ಪ್ರತ್ಯೇಕ ಸುಖಾಸೀನ ಬೋಗಿಯಿದ್ದರೂ ಕೂಡ ಅದರಲ್ಲಿ ಪ್ರಯಾಣಿಸದೆ ತೃತೀಯ ದರ್ಜೆಯ ಟಿಕೆಟ್ ಪಡೆದು ಪ್ರಯಾಣಿಸಿದ್ದರಂತೆ ಗಾಂಧೀಜಿ.

ಗಾಂಧೀಜಿಯವರ ಬಳಿ 1943ರಲ್ಲಿ ಕಾರ್ಯದರ್ಶಿಯಾಗಿ ಸೇವೆಗೆ ಸೇರಿದ್ದ ಕಲ್ಯಾಣಮ್ 1948ರವರೆಗೆ ಅವರ ಹತ್ಯೆಯಾಗುವವರೆಗೂ ಇದ್ದರಂತೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.