ಕುಡಿದ ಮತ್ತಿನಲ್ಲಿ ಶಾಲಾ ಮಕ್ಕಳ ಮೇಲೆ ನೋಟುಗಳನ್ನು ಎಸೆದು ಪೊಲೀಸಪ್ಪನಿಂದ ಹೀನ ಕೃತ್ಯ, ವಿಡಿಯೋ!
70ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆ ವೇಳೆ ವೇದಿಕೆ ಮೇಲೆ ನೃತ್ಯ ಮಾಡುತ್ತಿದ್ದ ಶಾಲಾ ಮಕ್ಕಳ ಮೇಲೆ ಕುಡಿದ ಮತ್ತಿನಲ್ಲಿ ಪೊಲೀಸಪ್ಪ ನೋಟುಗಳನ್ನು ಎಸೆದಿದ್ದಾನೆ.

Published On :
ನಾಗಪುರ(ಮಹಾರಾಷ್ಟ್ರ): 70ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆ ವೇಳೆ ವೇದಿಕೆ ಮೇಲೆ ನೃತ್ಯ ಮಾಡುತ್ತಿದ್ದ ಶಾಲಾ ಮಕ್ಕಳ ಮೇಲೆ ಕುಡಿದ ಮತ್ತಿನಲ್ಲಿ ಪೊಲೀಸಪ್ಪ ನೋಟುಗಳನ್ನು ಎಸೆದಿದ್ದಾನೆ.
ಗಣರಾಜ್ಯೋತ್ಸವ ದಿನದಂದೆ ಕುಡಿದು ಬಂದಿದ್ದ ಮಹಾರಾಷ್ಟ್ರದ ಪೊಲೀಸ್ ನಾಗಪುರದ ಶಾಲೆಯೊಂದರಲ್ಲಿ ಶಾಲಾ ಮಕ್ಕಳು ಡ್ಯಾನ್ಸ್ ಮಾಡುವಾಗ ವೇದಿಕೆ ಮೇಲೆ ಬಂದಿದ್ದಾನೆ. ನಂತರ ಜೇಬಿನಿಂದ ದುಡಿನ ಕಂತೆಯನ್ನು ತೆಗೆದು ಮಕ್ಕಳ ಮೇಲೆ ಎಸೆದಿದ್ದಾನೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪೊಲೀಸಪ್ಪ ಇವರನ್ನು ಶಾಲಾ ಮಕ್ಕಳು ಅಂದುಕೊಂಡಿದ್ದಾನಾ? ಅಥವಾ ಬಾರ್ ಡ್ಯಾನ್ಸರ್ಸ್ ಅಂದುಕೊಂಡಿದ್ದಾನಾ ಎಂದು ಕಿಡಿಕಾರಿದ್ದಾರೆ.
ಶಾಲಾ ಮಕ್ಕಳ ಮೇಲೆ ನೋಟುಗಳನ್ನು ಎಸೆದಿರುವುದಕ್ಕೆ ಸಂಬಂಧಿಸಿದಂತೆ ಪೊಲೀಸಪ್ಪನ್ನು ಅಮಾನತು ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


