ನಾನು ಹಿಂದೂ ಮಹಿಳೆ ಮೈ ಮುಟ್ಟಿದ್ದೇನೆ, ನನ್ನ ಕೈ ಕಡಿತೀರಾ?: ಅನಂತಕುಮಾರ್ ಹೆಗ್ಡೆಗೆ ತೆಹ್ಸೀನ್ ಸವಾಲು!
ಹಿಂದೂ ಹುಡುಗಿ ಮೈ ಮುಟ್ಟಿದ ಕೈ ಇರಬಾರದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರಿಗೆ ತೆಹ್ಸೀನ್ ಪೂನಾವಾಲ ಎಂಬಾತ ಬಹಿರಂಗವಾಗಿ ಸವಾಲು ಹಾಕಿದ್ದಾನೆ.

Published On :
ನವದೆಹಲಿ: ಹಿಂದೂ ಹುಡುಗಿ ಮೈ ಮುಟ್ಟಿದ ಕೈ ಇರಬಾರದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರಿಗೆ ತೆಹ್ಸೀನ್ ಪೂನಾವಾಲ ಎಂಬಾತ ಬಹಿರಂಗವಾಗಿ ಸವಾಲು ಹಾಕಿದ್ದಾನೆ.
ನಾನಾ ನನ್ನ ಹಿಂದೂ ಪತ್ನಿಯ ಮೈಯನ್ನು ಮುಟ್ಟಿದ್ದೇನೆ. ನಿಮ್ಮ ಕೈಯಲ್ಲಿ ಏನು ಮಾಡೋಕೆ ಆಗುತ್ತೆ, ಇದು ಒಂದು ಧೈರ್ಯ ಸರ್! ಎಂದು ತೆಹ್ಸೀನ್ ಪೂನಾವಾಲ ಟ್ವೀಟ್ ಮಾಡಿ ಸವಾಲು ಆಗಿದ್ದಾನೆ. ಇದಕ್ಕೆ ಟ್ವೀಟರಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಅನಂತ್ ಕುಮಾರ್ ಹೆಗ್ಡೆ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದ ಕಾಂಗ್ರೆಸ್ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹೆಗಡೆಯವರೇ ಇನ್ನೂ ಕಾಲ ಮಿಂಚಿಲ್ಲ, ಘನ ವ್ಯಕ್ತಿಯಾಗಲು ಪ್ರಯತ್ನಿಸಿ ಎಂದು ಹೇಳಿದ್ದರು.
ದಿನೇಶ್ ಗುಂಡೂರಾವ್ ಅವರಿಗೆ ಪ್ರತಿಕ್ರಿಯಿಸಿದ್ದ ಅನಂತ್ ಕುಮಾರ್ ಹೆಗ್ಡೆ ಅವರು ನೀವು ಮುಸ್ಲಿಂ ಯುವತಿ ಹಿಂದೆ ಓಡಿ ಹೋಗಿದ್ದೆ ನಿಮ್ಮ ಸಾಧನೆ ಎಂದು ದಿನೇಶ್ ಗೆ ಹೆಗ್ಡೆ ತಿರುಗೇಟು ನೀಡಿದ್ದರು.
By doing this u insulted ur wife. His statement ws fr any hand which outrages da modesty of a hindu girl shud nt exist. She is ur wife, so this doesn’t amount to wat he said. Instead u ended up insulting her.
— Avinash Singh
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Dinesh Gundu Raoದಿನೇಶ್ ಗುಂಡೂರಾವ್Hindu womenAnantkumar Hegdeಅನಂತ್ ಕುಮಾರ್ ಹೆಗ್ಡೆTehseen Poonawallaತೆಹ್ಸೀನ್ ಪೂನಾವಾಲಹಿಂದು ಮಹಿಳೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


