ಶಬರಿಮಲೆ ವಿವಾದ: ಕೇರಳ ಸಂಸ್ಕೃತಿಗೆ ಎಡ ಸರ್ಕಾರದಿಂದ ಅಗೌರವ- ಪ್ರಧಾನಿ ಮೋದಿ
ಕಮ್ಯೂನಿಸ್ಟ್ ಸರ್ಕಾರ ಕೇರಳದ ಸಂಸ್ಕೃತಿಯನ್ನು ಅಗೌರವ ನೀಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ತ್ರಿಶೂರ್ : ಶಬರಿಮಲೆ ವಿವಾದ ಇಡೀ ದೇಶದ ಗಮನ ಸೆಳೆದಿದ್ದು, ದೇಶದ ಜನತೆ ಮಾನವೀಯ ದೃಷ್ಟಿಯಿಂದ ನೋಡುತ್ತಿದ್ದರೆ ಕಮ್ಯೂನಿಸ್ಟ್ ಸರ್ಕಾರ ಕೇರಳದ ಸಂಸ್ಕೃತಿಯನ್ನು ಅಗೌರವ ನೀಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ತ್ರಿಶೂರಿನಲ್ಲಿ ಇಂದು ಆಯೋಜಿಸಿದ್ದ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವಾಗಲೀ ಅಥವಾ ಕಮ್ಯೂನಿಸ್ಟ್ ಪಕ್ಷವಾಗಲೀ ಮಹಿಳೆಯರ ಸಬಲೀಕರಣದತ್ತ ಏನೂ ಮಾಡಿಲ್ಲ, ತ್ರಿವಳಿ ತಲಾಖ್ ನಿಷೇಧಕ್ಕೂ ಕಾಂಗ್ರೆಸ್
ಬೆಂಬಲಿಸುತ್ತಿಲ್ಲ ಎಂದರು.
ಭಾರತದಲ್ಲಿ ಹಲವು ಮಹಿಳಾ ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದಾರೆ. ಆದರೆ, ಕಮ್ಯೂನಿಸ್ಟ್ ಪಕ್ಷದಲ್ಲಿ ಒಬ್ಬ ಮಹಿಳಾ ನಾಯಕಿಯೂ ಇಲ್ಲ ಎಂದರು.
ವಿಜ್ಞಾನಿ ನಂಬಿ ನಾರಾಯಣ್ ಬಂಧಿಸಿದ ಯುಡಿಎಫ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಎರಡು ದಶಕಗಳಿಗೂ ಹೆಚ್ಚು ಕಾಲ ಇಸ್ರೋದಲ್ಲಿ ಶ್ರಮಿಸಿದ್ದ ನಂಬಿ ನಾರಾಯಣ್ ವಿರುದ್ಧ ಸುಳ್ಳು ಕೇಸ್ ದಾಖಲಿಸಲಾಗಿತ್ತು.ಆದರೆ, ಎನ್ ಡಿಎ ಸರ್ಕಾರ ಅವರಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ಮೋದಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


