ದೇಶ

ಮೇಘಾಲಯ ಗಣಿ ದುರಂತ: ಮತ್ತೊಂದು ಮೃತದೇಹ ಹೊರತೆಗೆದ ನೌಕಾಪಡೆ

ಮೇಘಾಲಯದ ಕಲ್ಲಿದ್ದಲು ಗಣಿಯಲ್ಲಿ ಸಿಲುಕಿದ್ದ ಡಜನ್ ಗೂ ಹೆಚ್ಚು ಕಾರ್ಮಿಕರ ಪೈಕಿ ಶನಿವಾರ ಮತ್ತೊಬ್ಬ ಕಾರ್ಮಿಕನ ಮ ಮೃತದೇಹವನ್ನು ಭಾರತೀಯ...

ಮೇಘಾಲಯ ಗಣಿ ದುರಂತ: ಮತ್ತೊಂದು ಮೃತದೇಹ ಹೊರತೆಗೆದ ನೌಕಾಪಡೆ
ರಕ್ಷಣಾ ಕಾರ್ಯಾಚರಣೆ
Published On :
ಶಿಲ್ಲಾಂಗ್: ಮೇಘಾಲಯದ ಕಲ್ಲಿದ್ದಲು ಗಣಿಯಲ್ಲಿ ಸಿಲುಕಿದ್ದ ಡಜನ್ ಗೂ ಹೆಚ್ಚು ಕಾರ್ಮಿಕರ ಪೈಕಿ ಶನಿವಾರ ಮತ್ತೊಬ್ಬ ಕಾರ್ಮಿಕನ ಮ ಮೃತದೇಹವನ್ನು ಭಾರತೀಯ ನೌಕಾಪಡೆ ಹೊರತೆಗೆದಿದೆ. 
ಡಿಸೆಂಬರ್ 13ರಿಂದ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಜನವರಿ 17ರಂದು ಸುಮಾರು ಒಂದು ತಿಂಗಳ ನಂತರ ಓರ್ವ ಕಾರ್ಮಿಕನ ಮೃತದೇಹ ಹೊರತೆಗೆಯಲಾಗಿತ್ತು. ಇಂದು ಸುಮಾರು 370 ಅಡಿ ಆಳದಲ್ಲಿ ಮತ್ತೊಬ್ಬ ಕಾರ್ಮಿಕನ ಮೃತದೇಹ ಪತ್ತೆಯಾಗಿದೆ.
ನೀರಿನೊಳಗಿನ ವಸ್ತುಗಳನ್ನು ಗುರುತಿಸಲು ವಿಶೇಷವಾಗಿ ತಯಾರಿಸಲಾದ ಅಂಡರ್​ ವಾಟರ್​ ಆರ್​ಒವಿ ಯಂತ್ರವನ್ನು ಬಳಸಿ ಇಂದು ಮಧ್ಯಾಹ್ನ 3.18ರ ಸುಮಾರಿಗೆ ಗಣಿಯ ರ್ಯಾಟ್-ಹೋಲ್ ನಲ್ಲಿದ್ದ ಮೃತದೇಹವನ್ನು ಹೊರ ತೆಗೆಯಲಾಗಿದೆ ಎಂದು ಹೆಸರು ಹೇಳಲು ಇಚ್ಚಿಸಿದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದೊಂದು ಅಕ್ರಮ ಕಲ್ಲಿದ್ದಲು ಗಣಿಯಾಗಿದ್ದು ಅಲ್ಲಿ ಕೆಲಸ ಮಾಡುತ್ತಿದ್ದ 15 ಕಾರ್ಮಿಕರು ಡಿಸೆಂಬರ್​ 13ರಂದು ಸುಮಾರು 370 ಅಡಿಯಲ್ಲಿ ಸಿಲುಕಿದ್ದರು. ಗಣಿ ಅಗೆಯುತ್ತಿದ್ದಾಗ ಸಮೀಪದ ನದಿಯ ನೀರು ನುಗ್ಗಿ ಅವಘಡ ಸಂಭವಿಸಿತ್ತು. ಅವರನ್ನು ರಕ್ಷಿಸಲು ನೌಕಾಪಡೆ ಸೇರಿ ಹಲವು ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸಿದ್ದವು. ಕಾರ್ಮಿಕರ ರಕ್ಷಣೆಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂಕೋರ್ಟ್​ ಆದೇಶ ನೀಡಿ, ಮೇಘಾಲಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.