ಬರೆದುಕೊಟ್ಟಿದ್ದ ಭಾಷಣ ಓದಲೂ ಪರದಾಡಿದ 'ಕೈ' ಸರ್ಕಾರದ ನೂತನ ಸಚಿವೆ, ಕಾರಣವೇನು?
ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ನೇತೃತ್ವದಲ್ಲಿ ನೂತನ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಮಹಿಳಾ ಮತ್ತು ಕಲ್ಯಾಣ ಸಚಿವೆ ಇರ್ಮಾತಿ ದೇವಿ...

Published On :
ಗ್ವಾಲಿಯರ್(ಮಧ್ಯಪ್ರದೇಶ): ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ನೇತೃತ್ವದಲ್ಲಿ ನೂತನ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಮಹಿಳಾ ಮತ್ತು ಕಲ್ಯಾಣ ಸಚಿವೆ ಇರ್ಮಾತಿ ದೇವಿ ಅವರುರ ಗಣರಾಜ್ಯೋತ್ಸವದ ಭಾಷಣ ಓದಲಾಗದೆ ಜಿಲ್ಲಾಧಿಕಾರಿಗೆ ಓದಲು ಹೇಳಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.
ಗ್ವಾಲಿಯರ್ ನ ಎಸ್ಎಎಫ್ ಮೈದಾನದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವೆ ಇರ್ಮಾತಿ ದೇವಿ ಬದಲಿಗೆ ಜಿಲ್ಲಾಧಿಕಾರಿ ಭರತ್ ಯಾದವ್ ಗಣರಾಜ್ಯೋತ್ಸವದ ಭಾಷಣವನ್ನು ಓದಿದ್ದರು. ಮೊದಲಿಗೆ ಸಚಿವೆ ಭಾಷಣದ ಕೆಲವು ಸಾಲುಗಳನ್ನು ಓದಿದ್ದರು. ನಂತರ ನಿಲ್ಲಿಸಿದ ಅವರು ಜಿಲ್ಲಾಧಿಕಾರಿ ಓದುತ್ತಾರೆ ಎಂದು ಅವರಿಗೆ ಭಾಷಣದ ಪ್ರತಿಯನ್ನು ನೀಡಿದ್ದರು.
ನಂತರ ಪ್ರತಿಕ್ರಿಯೆ ನೀಡಿರುವ ಇರ್ಮಾತಿ ದೇವಿ, ನನಗೆ ಕಳೆದ ಎರಡು ದಿನಗಳಿಂದ ಆರೋಗ್ಯ ಸರಿಯಿಲ್ಲ. ಬೇಕಾದರೆ ನೀವು ವೈದ್ಯರನ್ನು ಕೇಳಿ. ಈಗ ಸ್ವಲ್ಪ ಪರವಾಗಿಲ್ಲ. ಭಾಷಣವನ್ನು ತಪ್ಪಾಗಿ ಓದಬಾರದೆಂದು ನಾನು ಜಿಲ್ಲಾಧಿಕಾರಿ ಭಾಷಣ ಓದಲು ಹೇಳಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Republic DayMadhya Pradeshಗಣರಾಜ್ಯೋತ್ಸವ ದಿನSpeechಭಾಷಣಮಧ್ಯಪ್ರದೇಶಜಿಲ್ಲಾಧಿಕಾರಿcollectorImarti Deviಇರ್ಮಾತಿ ದೇವಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


