ದೇಶ

ಗಣರಾಜ್ಯೋತ್ಸವ ಪರೇಡ್: ಇದೇ ಮೊದಲ ಬಾರಿ ಪುರುಷ ತುಕಡಿಗೆ ಮಹಿಳಾ ಅಧಿಕಾರಿ ಸಾರಥ್ಯ!

ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ ನಲ್ಲಿ ಇದೇ ಮೊದಲ ಬಾರಿಗೆ ಪುರುಷ ತುಕಡಿಗೆ ಮಹಿಳಾ ಅಧಿಕಾರಿ ಸಾರಥ್ಯ ವಹಿಸಲಿದ್ದಾರೆ.

ಗಣರಾಜ್ಯೋತ್ಸವ ಪರೇಡ್: ಇದೇ ಮೊದಲ ಬಾರಿ ಪುರುಷ ತುಕಡಿಗೆ ಮಹಿಳಾ ಅಧಿಕಾರಿ ಸಾರಥ್ಯ!
ಲೆಪ್ಟಿನೆಂಟ್ ಭಾವನಾ ಕಸ್ತೂರಿ
Published On :

ನವದೆಹಲಿ: ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ ನಲ್ಲಿ ಇದೇ ಮೊದಲ ಬಾರಿಗೆ ಪುರುಷ ತುಕಡಿಗೆ ಮಹಿಳಾ ಅಧಿಕಾರಿ ಸಾರಥ್ಯ ವಹಿಸಲಿದ್ದಾರೆ.

 ರಾಜಪಥ ಮಾರ್ಗದಲ್ಲಿ  ಇಡೀ ದೇಶದ ಎದುರು ಲೆಪ್ಟಿನೆಂಟ್  ಭಾವನಾ  ಕಸ್ತೂರಿ ಆದೇಶದಂತೆ 144 ಯೋಧರು  ಪರೇಡ್ ನಡೆಸಲಿದ್ದಾರೆ.  

ಹೈದ್ರಾಬಾದ್ ಮೂಲದ ಭಾವನಾ ಕಸ್ತೂರಿ ಎರಡೂವರೆ ವರ್ಷಗಳ ಹಿಂದೆ ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದಾರೆ.

ಸೇನಾ ಮುಖ್ಯಸ್ಥರಿಗೆ ಗೌರವ ಸಲ್ಲಿಸಿ ಅವರ ಎದುರುಗಡೆ ಕಮಾಂಡ್ ನೀಡುವ ಕನಸಿನ ಕ್ಷಣವನ್ನು ಎದುರು ನೋಡುತ್ತಿರುವುದಾಗಿ ಯುವ ಅಧಿಕಾರಿ  ಹೇಳಿದ್ದಾರೆ.

ಪರೇಡ್ ವೀಕ್ಷಣೆಗಾಗಿ ಬರುವ ಜನರನ್ನು ನೋಡುವುದಕ್ಕೆ ಕಾತುರವಾಗಿದ್ದು, ತಮ್ಮನ್ನು ನೋಡಿ ಸಹಸ್ರಾರು ಹೆಣ್ಣು ಮಕ್ಕಳು ಸಂತಸಗೊಳ್ಳಲಿದ್ದಾರೆ ಎಂದು ಭಾವನಾ ಕಸ್ತೂರಿ  ಸಂತಸ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.