ಶಿಕ್ಷಣಕ್ಕಾಗಿ ವಲಸೆ ಹೋದವರಿಂದ ಭಾರತಕ್ಕೆ ಕೀರ್ತಿ - ಸುಷ್ಮಾ ಸ್ವರಾಜ್
ಶಿಕ್ಷಣಕ್ಕಾಗಿ ಬೇರೆ ರಾಷ್ಟ್ರಗಳಿಗೆ ವಲಸೆ ಹೋದವರು ಭಾರತಕ್ಕೆ ಕೀರ್ತಿಯನ್ನು ತಂದಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ

ವಾರಣಾಸಿ: ಶಿಕ್ಷಣಕ್ಕಾಗಿ ಬೇರೆ ರಾಷ್ಟ್ರಗಳಿಗೆ ವಲಸೆ ಹೋದವರು ಭಾರತಕ್ಕೆ ಕೀರ್ತಿಯನ್ನು ತಂದಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ
ಪ್ರವಾಸಿ ಭಾರತೀಯ ದಿವಸ್ ಆಚರಣೆ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಸ್ತುತ ಅನೇಕ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಭಾರತ ಮೂಲದ ಯುವಕರು ಸಿಇಓ ಆಗಿದ್ದಾರೆ. ಗೂಗಲ್ ಸಂಸ್ಥೆಯ ಸುಂದರ್ ಪಿಚ್ಚೈ, ಮೈಕ್ರೋಸಾಪ್ಟ್ ಕಂಪನಿಯ ಸತ್ಯ ನಾಡೆಲ್, ಐಎಂಎಫ್ ಮುಖ್ಯಸ್ಥೆ ಗೀತಾ ಗೋಪಿನಾಥ್ ಮತ್ತಿತರರು ಅನನ್ಯ ಸಾಧನೆ ಮಾಡಿದ್ದು, ನಮ್ಮಗೆಲ್ಲರಿಗೂ ಸ್ಪೂರ್ತಿಯಾಗಿದ್ದಾರೆ ಎಂದರು.
ವಲಸೆ ಹೋಗಿರುವ ಪ್ರತಿಯೊಬ್ಬ ಭಾರತೀಯರು ತಮ್ಮ ಬದ್ದತೆ, ಉತ್ಸಾಹ ಹಾಗೂ ತಾಳ್ಮೆ, ಹಾಗೂ ಶ್ರಮದಿಂದ ಯಶಸ್ಸು ಸಾಧಿಸಿರುವುದಾಗಿ ಹೇಳಿದರು.
ಪ್ರವಾಸಿ ಭಾರತೀಯ ದಿವಸ ಯುವಕರಿಗೆ ಪ್ರಮುಖವಾದ ಕಾರ್ಯಕ್ರಮವಾಗಿದೆ. ಇದು ಮಾರ್ಗ ತೋರಿಸುವುದು ಮಾತ್ರವಲ್ಲದೇ, ನವ ಭಾರತ ನಿರ್ಮಾಣದಲ್ಲಿ ಹೇಗೆ ಭಾಗವಾಗಬಹುದು ಎಂಬುದರ ಬಗ್ಗೆ ಕಲಿಸುತ್ತದೆ. ಗುಣಮಟ್ಟದ ಶಿಕ್ಷಣ, ತಂತ್ರಜ್ಞಾನ, ಸ್ಟಾರ್ಟ್ ಆಫ್ ಮತ್ತಿತರ ಅವಕಾಶಗಳ ಬಗ್ಗೆಯೂ ತಿಳಿಸುತ್ತದೆ ಎಂದರು.
ಉನ್ನತ ಶಿಕ್ಷಣದಲ್ಲಿ ಉತ್ತಮ ಅವಕಾಶದ ಹುಡುಕಾಟಕ್ಕಾಗಿ ಅನೇಕ ಮಂದಿ ಭಾರತ ತೊರೆಯುತ್ತಿದ್ದಾರೆ. ಸದ್ಯ ಭಾರತದಲ್ಲಿಯೇ ವಿಶ್ವ ದರ್ಜೆ ಮಟ್ಟದ ವಿಶ್ವವಿದ್ಯಾಲಯಗಳ ಸೌಕರ್ಯ ಹಾಗೂ ಐಐಟಿ, ಐಐಎಂನಂತಹ ಶಿಕ್ಷಣ ಸಂಸ್ಥೆಗಳಿಂದ ಸಂಶೋಧನಾ ಅಭಿವೃದ್ದಿ ಶಿಕ್ಷಣ ದೊರೆಯುತ್ತಿದೆ ಎಂದು ಸುಷ್ಮಾ ಸ್ವರಾಜ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


