ವಸುಂಧರಾ ರಾಜೆ ಸರ್ಕಾರ "ಅನುಪಯುಕ್ತ ವಿಷಯಗಳ" ಮೇಲೆ ಗಮನ ಕೇಂದ್ರೀಕರಿಸಿತ್ತು: ರಾಜಸ್ಥಾನ ರಾಜ್ಯಪಾಲ
ಈ ಹಿಂದಿನ ಬಿಜೆಪಿ ಸರ್ಕಾರ ಅದಕ್ಕೆ ಹಿಂದಿದ್ದ ಕಾಂಗ್ರೆಸ್ ಸರ್ಕಾರದ ಹುಳುಕುಗಳನ್ನು ಹುಡುಕುವುದರಲ್ಲೇ ಸಮಯ ಕಳೆದಿದೆ ಎಂದು ರಾಜಸ್ಥಾನ ರಾಜ್ಯಪಾಲ ಕಲ್ಯಾಣ್ ಸಿಂಗ್ ಆರೋಪಿಸಿದ್ದಾರೆ.

Published On :
ಜೈಪುರ: ಈ ಹಿಂದಿನ ಬಿಜೆಪಿ ಸರ್ಕಾರ ಅದಕ್ಕೆ ಹಿಂದಿದ್ದ ಕಾಂಗ್ರೆಸ್ ಸರ್ಕಾರದ ಹುಳುಕುಗಳನ್ನು ಹುಡುಕುವುದರಲ್ಲೇ ಸಮಯ ಕಳೆದಿದೆ ಎಂದು ರಾಜಸ್ಥಾನ ರಾಜ್ಯಪಾಲ ಕಲ್ಯಾಣ್ ಸಿಂಗ್ ಆರೋಪಿಸಿದ್ದಾರೆ. ನೂತನ ವಿಧಾನಸಭೆ ಸದಸ್ಯರನ್ನುದ್ದೇಶಿಸಿ ಅಧಿವೇಶನದಲ್ಲಿ ಮಾತನಾಡಿದ ಸಿಂಗ್ ಈ ಹೇಳಿಕೆ ನೀಡಿದ್ದಾರೆ.
ಇತ್ತೀಚೆಗೆ ರಚನೆಯಾಗಿರುವ ಕಾಂಗ್ರೆಸ್ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರವನ್ನುದ್ದೇಶಿಸಿ ಮಾತನಾಡಿದರಾಜ್ಯಪಾಲ ವಸುಂಧರಾ ರಾಜೇ ಸರಕಾರದ ಅವಧಿಯಲ್ಲಿ ಆರ್ಥಿಕ ಬೆಳವಣಿಗೆ ದರ ಕುಸಿದಿದೆ ಎಂದು ಹೇಳಿದರು.
"ಹಿಂದಿನ ಸರ್ಕಾರದ ದೋಷಗಗಳನ್ನು ಹುಡುಕುತ್ತಲೇ ಅನುಪಯುಕ್ತ ವಿಚಾರಗಳ ಬಗ್ಗೆಯೇ ಈ ಹಿಂದಿನ ಸರ್ಕಾರ ಸಾಕಷ್ಟು ಗಮನ ಹರಿಸುವ ಮೂಲಕ ಸಮಯ ಹಾಳು ಮಾಡಿದೆ. ಈ ಪರಿಣಾಮ ರಾಜ್ಯದ ಆರ್ಥಿಕ ಪ್ರಗತಿಯ ದರ 2009-10ರಲ್ಲಿ ಶೇ 8. 16 ಇದ್ದದ್ದು 2014-15 ಹಾಗೂ 2017-18ರಲ್ಲಿ ಶೇ. 7.19 ಗೆ ಕುಸಿದಿದೆ" ಕಲ್ಯಾಣ್ ಸಿಂಗ್ ಹೇಳಿದ್ದಾರೆ.
2009-10 ರಿಂದ 2013-14ರವರೆಗೆ ತಲಾ ಆದಾಯದ ಸರಾಸರಿ ಏರಿಕೆ 14.95 ಶೇ. ಆಗಿದ್ದದ್ದು 2014-15ರ, 2017-18ರ ಅವಧಿಯಲ್ಲಿ 9.68 ಶೇ .ಗೆ ಇಳಿಕೆಯಾಗಿದೆಅದೇ ರೀತಿ, 2008-09ರಲ್ಲಿ ಕೃಷಿ ವಲಯದಲ್ಲಿ ಶೇ.8.94 ರಷ್ಟು ಬೆಳವಣಿಗೆ ದರ ದಾಖಲಾಗಿತ್ತು. ಇದೀಗ 2013-14ನೇ ಸಾಲಿನಲ್ಲಿ ಶೇ.4.19 ಕ್ಕೆ ಕಡಿಮೆಯಾಗಿದೆ. 2017-18ರ ಅವಧಿಯಲ್ಲಿ ಇದು ಶೇ 3.95 ಕ್ಕೆ ಇಳಿದಿದೆ. ಇದಕ್ಕೆ ವಸುಧರಾ ರಾಜೆ ಅವರ ಸರ್ಕಾರದ ತಪ್ಪು ನೀತಿಗಳೇ ಕಾರಣ ಎಂದು ಅವರು ದೂರಿದ್ದಾರೆ.
ರಾಜ್ಯಪಾಲರ ಭಾಷಣ ಹಾಗೂ ಆರೋಪಗಳ ಕುರಿತು ಇದೀಗ ರಾಜ್ಯದ ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ ತಕ್ಷಣಕ್ಕೆ ಯಾವ ಪ್ರತಿಕ್ರಿಯೆ ನೀಡಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Vasundhara Rajeವಸುಂಧರಾ ರಾಜೆKalyan Singhಕಲ್ಯಾಣ್ ಸಿಂಗ್Rajasthan Governor addressರಾಜಸ್ಥಾನ ರಾಜ್ಯಪಾಲ ಭಾಷಣ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


