'ಕನ್ಯೆಯರು ಮುಚ್ಚಿದ ಬಾಟಲ್ ಹಾಗೆ' ಪ್ರೊಫೆಸರ್‌ನಿಂದ ಕೀಳುಮಟ್ಟದ ಫೇಸ್‍ಬುಕ್ ಪೋಸ್ಟ್, ಕಿಡಿ!
ಪಶ್ಚಿಮ ಬಂಗಾಳದ ಜಾಧವ್ ಪುರ ವಿಶ್ವವಿದ್ಯಾಲಯದ ಪ್ರೊಫೆಸರ್ ಕನಕ್ ಸರ್ಕಾರ್ ಎಂಬುವರು ಯುವತಿಯರ ಕನ್ಯತ್ವದ ಬಗ್ಗೆ ಫೇಸ್‍ಬುಕ್‍ನಲ್ಲಿ ಅಶ್ಲೀಲವಾಗಿ ಪೋಸ್ಟ್ ಮಾಡುವ ಮೂಲಕ ವಿವಾದವನ್ನು...

Published On :
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಜಾಧವ್ ಪುರ ವಿಶ್ವವಿದ್ಯಾಲಯದ ಪ್ರೊಫೆಸರ್ ಕನಕ್ ಸರ್ಕಾರ್ ಎಂಬುವರು ಯುವತಿಯರ ಕನ್ಯತ್ವದ ಬಗ್ಗೆ ಫೇಸ್‍ಬುಕ್‍ನಲ್ಲಿ ಅಶ್ಲೀಲವಾಗಿ ಪೋಸ್ಟ್ ಮಾಡುವ ಮೂಲಕ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.
ಯುವತಿಯರ ಕನ್ಯತ್ವವನ್ನು ತಂಪು ಪಾನೀಯಕ್ಕೆ ಹೋಲಿಸಿ, ನೀವು ಸೀಲ್ ಒಡೆದಿರುವ ತಂಪು ಪಾನೀಯ ಖರೀದಿ ಮಾಡುತ್ತೀರಾ ಎಂದು ಪ್ರಶ್ನಿಸಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಪ್ರಕಟಿಸಿದ್ದಾರೆ.

ನೀವು ಸೀಲ್ ಒಡೆದಿರುವ ತಂಪು ಪಾನೀಯವನ್ನು ಖರೀದಿ ಮಾಡುತ್ತೀರಾ ಅಥವಾ ಪ್ಯಾಕ್ ಆಗಿರುವ ಬಿಸ್ಕೇಟ್ ಅನ್ನು ಖರೀದಿ ಮಾಡುತ್ತೀರಾ ಎಂದು ಯುವಕರಿಗೆ ಕನಕ್ ಸರ್ಕಾರ್ ಪ್ರಶ್ನಿಸಿದ್ದು, ಕನ್ಯತ್ವ ಹೊಂದಿರುವ ಯುವತಿಯರ ಬಗ್ಗೆ ಈಗಿನ ಹುಡುಗರಿಗೆ ಅರಿವು ಇಲ್ಲ. ಹುಡುಗಿ ಸೀಲ್ ಆಗಿದ್ದರೆ ಆಕೆ ದೇವತೆ ಎಂದು ಬರೆದುಕೊಂಡಿದ್ದಾರೆ.
ಈ ತಮ್ಮ ಪೋಸ್ಟ್ ಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಕನಕ್ ಸರ್ಕಾರ್ ತಮ್ಮ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
FacebookProfessorಫೇಸ್ಬುಕ್ಪ್ರೊಫೆಸರ್Jadavpur UniversityVirgin girlKanak Sarkarಕನ್ಯೆಯರುಜಾಧವ್ ಪುರ ವಿಶ್ವವಿದ್ಯಾಲಯಕನಕ್ ಸರ್ಕಾರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


