ದೇಶ

100 ಪೇಯ್ಡ್ ಅಥವಾ ಉಚಿತ ಟಿವಿ ಚಾನೆಲ್, ತಿಂಗಳಿಗೆ ರೂ.153: ಟ್ರಾಯ್

ಟಿವಿ ವೀಕ್ಷಕರಿಗೆ ಭರ್ಜರಿ ಕೊಡುಗೆ. ಗ್ರಾಹಕರು ತಿಂಗಳಿಗೆ ರೂ. 153 ರೂ. ಪಾವತಿಸಿ ಪೇಯ್ಡ್ ಅಥವಾ ಉಚಿತ ಚಾನೆಲ್ ಗಳನ್ನು ವೀಕ್ಷಿಸಬಹುದಾಗಿದೆ.

100 ಪೇಯ್ಡ್ ಅಥವಾ ಉಚಿತ ಟಿವಿ ಚಾನೆಲ್, ತಿಂಗಳಿಗೆ ರೂ.153: ಟ್ರಾಯ್
ಸಾಂದರ್ಭಿಕ ಚಿತ್ರ
Published On :

ನಾಗಪುರ: ಟಿವಿ ವೀಕ್ಷಕರಿಗೆ ಭರ್ಜರಿ ಕೊಡುಗೆ. ಗ್ರಾಹಕರು ತಿಂಗಳಿಗೆ ರೂ. 153 ರೂ. ಪಾವತಿಸಿ 100 ಪೇಯ್ಡ್ ಅಥವಾ ಉಚಿತ ಚಾನೆಲ್ ಗಳನ್ನು ವೀಕ್ಷಿಸಬಹುದಾಗಿದೆ.

ಗ್ರಾಹಕರು ಜಿಎಸ್ ಟಿ ಸೇರಿದಂತೆ ತಿಂಗಳಿಗೆ  153.40 ರೂ. ಪಾವತಿಸಿ  ಪೇಯ್ಡ್ ಅಥವಾ ಉಚಿತ ಚಾನೆಲ್ ಗಳನ್ನು ವೀಕ್ಷಿಸಬಹುದಾಗಿದೆ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಟ್ರಾಯ್ ಆದೇಶಿಸಿದೆ.

ಫೆಬ್ರವರಿ 1 ರಿಂದ ಹೊಸ ವ್ಯವಸ್ಥೆ ಜಾರಿಗೆ ಬರಲಿದ್ದು, ಜನವರಿ 31 ರೊಳಗೆ ಈ 100 ಚಾನೆಲ್ ಗಳನ್ನು ಗ್ರಾಹಕರು ಆಯ್ಕೆ ಮಾಡಬೇಕಾಗುತ್ತದೆ.

ಟ್ರಾಯ್ ಆದೇಶ ಹೆಚ್ ಡಿ ಚಾನೆಲ್ ಗಳಿಗೆ ಅನ್ವಯವಾಗುವುದಿಲ್ಲ. ಆದಾಗ್ಯೂ, ಹೆಚ್ ಡಿ ಚಾನೆಲ್ ಗಳನ್ನು ಕೂಡಾ ಆಯ್ಕೆ ಮಾಡಬಹುದಾಗಿದೆ ಎಂದು ಕೆಲ ಮಾಧ್ಯಮ ಏಜೆನ್ಸಿಗಳು ವರದಿ ಮಾಡಿವೆ.
ಒಂದು ಎಚ್ ಡಿ ಚಾನೆಲ್  ಎರಡು ಹೆಚ್ ಡಿಯೇತರ ಚಾನೆಲ್ ಗೆ ಸಮನವಾಗಿರಲಿದ್ದು, ಗ್ರಾಹಕರು ಹೆಚ್ಚಿನ ಮಾಹಿತಿಗಾಗಿ  ತಮ್ಮ ಸೇವಾ ಸಂಸ್ಥೆಗಳನ್ನು ಸಂಪರ್ಕಿಸಬಹುದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.