ಶಬರಿಮಲೆಯಲ್ಲಿ ಅಯ್ಯಪ ಮಕರ ಜ್ಯೋತಿ ದರ್ಶನ, ಪುಳಕಗೊಂಡ ಭಕ್ತ ಸಾಗರ
ಕೇರಳ ಪ್ರಸಿದ್ದ ಶಬರಿಮಲೆ ಅಯ್ಯಪ್ಪ ದೇವಾಲಯದಲ್ಲಿ ಇಂದು (ಜನವರಿ 14) ಮಕರಜ್ಯೋತಿ ಕಾಣಿಸಿದೆ. ಅಯ್ಯಪ್ಪನ ಸನ್ನಿಧಾನ ಪೊನ್ನಂಬಲಮೇಡು ಬೆಟ್ಟದಲ್ಲಿ ಜ್ಯೋತಿ ದರ್ಶನವಾಗಿದ್ದು.....

Published On :
ಶಬರಿಮಲೆ: ಕೇರಳ ಪ್ರಸಿದ್ದ ಶಬರಿಮಲೆ ಅಯ್ಯಪ್ಪ ದೇವಾಲಯದಲ್ಲಿ ಇಂದು (ಜನವರಿ 14) ಮಕರಜ್ಯೋತಿ ಕಾಣಿಸಿದೆ. ಅಯ್ಯಪ್ಪನ ಸನ್ನಿಧಾನ ಪೊನ್ನಂಬಲಮೇಡು ಬೆಟ್ಟದಲ್ಲಿ ಜ್ಯೋತಿ ದರ್ಶನವಾಗಿದ್ದು ಸಾವಿರಾರು ಭಕ್ತರು ಜ್ಯೋತಿ ದರ್ಶನ ಪಡೆದು ಪುಳಕಿತರಾಗಿದ್ದಾರೆ.
ಅಯ್ಯಪ್ಪ ಸನ್ನಿಧಾನಕ್ಕೆ ಮಹಿಳೆಯರ ಪ್ರವೇಶದಿಂದ ವಿವಾದ ಹಾಗೂ ಸಂಘರ್ಷಗಳಿಗೆ ಸಾಕ್ಷಿಯಾಗಿದ್ದ ಶಬರಿಮಲೆಯಲ್ಲಿ ಮಕರ ಸಂಕ್ರಾಂತಿ ಮುನ್ನಾ ದಿನ ಮಕರ ಜ್ಯೋತಿ ದರ್ಶನವಾಗಿದೆ.
ಜ್ಯೋತಿಯ ದರ್ಶನ ಆಗುತ್ತಿದ್ದಂತೆಯೇ ಭಕ್ತರು ಗಟ್ಟಿ ದನಿಯಲ್ಲಿ “ಸ್ವಾಮಿಯೇ ಶರಣಂ ಅಯ್ಯಪ್ಪ” ಎಂದು ಜಯಘೋಷಗಳನ್ನು ಮಾಡಿದ್ದಾರೆ.
ದೇಶದ ನಾನಾ ಕಡೆಗಳಿಂದ ಶಬರಿಮಲೆ ಸನ್ನಿಧಾನಕ್ಕೆ ಭಕ್ತರು ಆಗಮಿಸಿದ್ದು ಜ್ಯೋತಿ ದರ್ಶನಕ್ಕೆ ಸಾಖ್ಶಿಯಾಗಿದ್ದರು. ಆದರೆ ವಿವಾದ, ಕ್ಷೋಭೆಗಳ ಕಾರಣದಿಂದ ಕಳೆದ ಹಲವು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಭಕ್ತರ ಸಂಖ್ಯೆ ಇಳಿಮುಖವಾಗಿದ್ದದ್ದು ಕಂಡು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


