ಘಾಜಿಯಾಬಾದ್: ಎನ್ಐಎನಿಂದ ಇಸಿಸ್ ಪ್ರೇರಿತ ಸಂಘಟನೆ 12 ಉಗ್ರರ ಬಂಧನ
ಆತ್ಮಹತ್ಯೆ ದಾಳಿಗಳು ಮತ್ತು ಸರಣಿ ಸ್ಪೋಟಗಳ ಸಂಬಂಧ, ದೆಹಲಿ ಮತ್ತಿತರೆಡೆಗಳಲ್ಲಿ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ಗುರುಇಯಾಗಿರಿಸಿಕೊಂಡಿದ್ದ ಇಸಿಸ್ ಗುಂಪಿನ ಸದಸ್ಯರನ್ನು .....

Published On :
ನವದೆಹಲಿ: ಆತ್ಮಹತ್ಯೆ ದಾಳಿಗಳು ಮತ್ತು ಸರಣಿ ಸ್ಪೋಟಗಳ ಸಂಬಂಧ, ದೆಹಲಿ ಮತ್ತಿತರೆಡೆಗಳಲ್ಲಿ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ಗುರಿಯಾಗಿರಿಸಿಕೊಂಡಿದ್ದ ಇಸಿಸ್ ಗುಂಪಿನ ಸದಸ್ಯರನ್ನು ಉತ್ತರ ಪ್ರದೇಶದ ಘಾಜಿಯಾಬಾದ್ ನಲ್ಲಿ ಬಂಧಿಸಿರುವುದಾಗಿ ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಹೇಳಿಕೊಂಡಿದೆ.
ಮೀರತ್, ಹಾಪುರ್ ಮತ್ತು ಘಾಜಿಯಾಬಾದ್ ನಲ್ಲಿ ಶನಿವಾರ ಹಲವರನ್ನು ಬಂಧಿಸಲಾಗಿ, ವಿಚಾರಣೆ ನಡೆಸಲಾಗಿದೆ ಎಂದು ಸಂಸ್ಥೆ ಹೇಳಿದೆ.ಮುಹಮ್ಮದ್ ಅಬ್ಸರ್ (24) ಎಂಬಾತನನ್ನು ಶುಕ್ರವಾರ ರಾತ್ರಿ ಹಾಪುರ್ ನಲ್ಲಿ ಬಂಧಿಸಿದ್ದಾಗಿ ಏಜೆನ್ಸಿಯ ವಕ್ತಾರರು ಮಾಹಿತಿ ನೀಡಿದ್ದಾರೆ.
ಅಲ್ಲದೆ ಇತ್ತೀಚಿನ ದಿನಗಳಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸುತ್ತಿದ್ದ ಒಟ್ಟಾರೆ 12 ಜನರನ್ನು ಎನ್ಐಎ ಬಂಧಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಅಬ್ಸರ್ ಉತ್ತರಪ್ರದೇಶದ ಮೀರತ್ ಜಿಲ್ಲೆಯ ಜಸೊರಾ ನಿವಾಸಿಯಾಗಿದ್ದು ಘಾಜಿಯಾಬಾದ್ ನ ಪಿಪ್ಪಿರಾ ಪ್ರದೇಶದಲ್ಲಿರುವ ಜಾಮಿಯಾ ಹುಸನಿಯಾ ಅಬುಲ್ ಹಾಸನದಲ್ಲಿ ಉಗ್ರ ಚಟುವಟಿಕೆ ತರಬೇತಿ ನೀಡುತ್ತಿದ್ದನೆಂದು ಅವರು ಹೇಳಿದರು. ಅಷ್ಟೇ ಅಲ್ಲದೆ ಅಬ್ಸರ್ ಕಳೆದ ಮೇ-ಆಗಸ್ಟ್ 2018 ರ ನಡುವೆ ಕಾಶ್ಮೀರದ ಮೂರು ಸ್ಥಳಗಳಿಗೆ ಭೇಟಿ ನೀಡಿದ್ದನು. ಇವನೊಡನೆ ಇನ್ನೊಬ್ಬ ಆರೋಪಿಯಾಗಿರುವ ಇಫ್ತಿಕರ್ ಸಕೀಬ್ ಸಹ ಇದ್ದನು, ಇವರಿಬ್ಬರೂ ಭಯೋತ್ಪಾದಕ ಚಟುವಟಿಕೆ ಸಂಬಮ್ಂಧ ಪಿತೂರಿ ನಡೆಸಲು ಯೋಜಿಸಿದ್ದರು.
ಶನಿವಾರ ಇಲ್ಲಿ ವಿಶೇಷ ಎನ್ಐಎ ನ್ಯಾಯಾಲಯಕ್ಕೆಇವರುಗಳನ್ನು ಹಾಜರುಪಡಿಸುತ್ತಿದ್ದು ಅವರ ನ್ಯಾಯಾಂಗ ಬಂಧನಕ್ಕಾಗಿ ಮನವಿ ಸಲ್ಲಿಸಲಾಗಿದೆ.ಈ ಆರೋಪಿಗಳು ಜಾಗತಿಕ ಭಯೋತ್ಪಾದಕ ಸಮೂಹ ಇಸಿಸ್ ನ 'ಹರ್ಕಾತ್ ಉಲ್ ಹರಬ್ ಇಸ್ ಇಸ್ಲಾಂ' ಘಟಕದ ಭಾಗವಾಗಿದ್ದರೆಂದ್ಯು ಎನ್ಐಎ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


