ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳ ವಿವಾಹಕ್ಕೆ ಹೈದರಾಬಾದ್ ಆಸ್ಪತ್ರೆಯೇ ವೇದಿಕೆಯಾಯ್ತು!
ಪ್ರೀತಿಗೆ ನಿರಾಕರಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಜೋಡಿಯನ್ನು ಆಸ್ಪತ್ರೆಯಲ್ಲಿಯೇ ಒಂದಾಗಿಸಿರುವ ಘಟನೆ ತೆಲಂಗಆಣದ ಧರೂರ್ ಎಂಬಲ್ಲಿ ನಡೆದಿದೆ.

Published On :
ಹೈದರಾಬಾದ್: ಪ್ರೀತಿಗೆ ನಿರಾಕರಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಜೋಡಿಯನ್ನು ಆಸ್ಪತ್ರೆಯಲ್ಲಿಯೇ ಒಂದಾಗಿಸಿರುವ ಘಟನೆ ತೆಲಂಗಆಣದ ಧರೂರ್ ಎಂಬಲ್ಲಿ ನಡೆದಿದೆ.
ದೀರ್ಘಕಾಲದಿಂಡ ಪ್ರೀತಿಸುತ್ತಿದ್ದ ರೇಶ್ಮಾ ಹಾಗೂ ನವಾಜ್ ಮನೆಯವರು ವಿರೋಧಿಸಿದ್ದಕ್ಕಾಗಿ ಕೀಟನಾಶಕ ಸೇವಿಸಿ ಸಾವಿಗೆ ಶರಣಾಗಲು ಯತ್ನಿಸಿದ್ದಾರೆ. ಇಬ್ಬರನ್ನೂ ವಿಕರಾಬಾದ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.ಇಬ್ಬರೂ ಪ್ರಾಣಾಪಯಾದಿಂಡ ಪಾರಾಗಿದ್ದು ಮಕ್ಕಳ ಈ ದೃಢ ನಿರ್ಧಾರದಿಂದ ಕುಪಿತರಾದ ಪೋಷಕರು ಅವರಿಗೆ ಆಸ್ಪತ್ರೆಯಲ್ಲಿಯೇ ಮದುವೆ ಮಾಡಿಸಿದ್ದಾರೆ.
ಘಟನೆ ವಿವರ
19 ವರ್ಷದ ರೇಷ್ಮಾ ಬೇಗಂ ಹಾಗೂ ವಾಜ್ (21) ಪರಸ್ಪರ ಪ್ರೀತಿಸುತ್ತಿದ್ದು ಈ ವಿಚಾರವನ್ನು ಮನೆಯವರಿಗೆ ಸಹ ತಿಳಿಸಿದ್ದಾರೆ. ಆದರೆ ಇಬ್ಬರ ಮನೆಯಲ್ಲಿಯೂ ವಿರೋಧ ವ್ಯಕ್ತವಾಗಿದೆ. ಆಗ ರೇಷ್ಮಾ ಮನೆಯವರು ಆಕೆಗೆ ಬೇರೆ ಗಂಡು ನೋಡಲು ಪ್ರಾರಂಭಿಸಿದ್ದಾರೆ. ಇದನ್ನು ತಿಳಿದ ರೇಷ್ಮಾ ತಾನು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ. ತಕ್ಷಣ ಆಕೆಯನ್ನು ವಿಕರಾಬಾದ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಆದರೆ ಪ್ರಿಯತಮೆಯ ಆತ್ಮಹತ್ಯೆ ಯತ್ನ ನಡೆಸಿರುವುದು ತಿಳಿದ ನವಾಜ್ ತಾನು ಸಹ ಆಸ್ಪತ್ರೆಗೆ ದಾವಿಸಿದ್ದಲ್ಲದೆ ತಾನೂ ಕೀಟನಾಶಕ ಸೇವಿಸಿ ಸಾಯುವುದಕ್ಕೆ ಯತ್ನಿಸಿದ. ಇದಾಗ ಅವನನ್ನು ಸಹ ಅದೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇಬ್ಬರೂ ಈಗ ಪ್ರಾಣಾಪಾಯದಿಂದ ಪಾರಾಗಿದ್ದು ಸತಿ-ಪತಿಗಳಾಗಿ ಸಂತಸದ ಜೀವನ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಹೈದರಾಬಾದ್ಮುಸ್ಲಿಂ ದಂಪತಿಗಳುMuslim couple marriageHyderabad hospitalHyderabad hospital marriageಹೈದರಾಬಾದ್ ಆಸ್ಪತ್ರೆಆಸ್ಪತ್ರೆ ವಿವಾಹ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


