2019 ಲೋಕಸಭಾ ಚುನಾವಣೆ 3ನೇ ಪಾಣಿಪತ್ ಕದನದಂತೆ, ಗೆಲ್ಲಲೇಬೇಕು- ಅಮಿತ್ ಶಾ
ಮುಂಬರುವ ಲೋಕಸಭಾ ಚುನಾವಣೆಯನ್ನು 1761ರಲ್ಲಿ ಮರಾಠ ಹಾಗೂ ಅಫ್ಘಾನರ ನಡುವೆ ನಡೆದಿದ್ದ ಮೂರನೇ ಪಾಣಿಪತ್ ಕದನಕ್ಕೆ ಹೋಲಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಈ ಚುನಾವಣೆಯಲ್ಲಿ ಗೆಲ್ಲಲೇಬೇಕಾಗಿದೆ ಎಂದು ಹೇಳಿದ್ದಾರೆ.

Published On :
ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯನ್ನು 1761ರಲ್ಲಿ ಮರಾಠ ಹಾಗೂ ಅಫ್ಘಾನರ ನಡುವೆ ನಡೆದಿದ್ದ ಮೂರನೇ ಪಾಣಿಪತ್ ಕದನಕ್ಕೆ ಹೋಲಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಈ ಚುನಾವಣೆಯನ್ನು ಗೆಲ್ಲಲೇಬೇಕಾಗಿದೆ ಎಂದು ಹೇಳಿದ್ದಾರೆ.
ರಾಮಲೀಲಾ ಮೈದಾನದಲ್ಲಿ ಬಿಜೆಪಿ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಮಹಾಘಟಬಂದನ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ರಾಜಕೀಯ ರಾಸಾಯನಶಾಸ್ತ್ರದಂತೆ , ಭೌತಶಾಸ್ತ್ರದಂತೆ ಅಲ್ಲ, ಉತ್ತರ ಪ್ರದೇಶದಲ್ಲಿ 2014ರ ಸಾಧನೆ ಮರುಕಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ
ಮೂರನೇ ಪಾಣಿಪತ್ ಕದನಕ್ಕೂ ಮುನ್ನ ಮರಾಠರು 131 ಯುದ್ದಗಳಲ್ಲಿ ಗೆಲುವು ಸಾಧಿಸಿ ಉತ್ತುಂಗ ಶಿಖರಕ್ಕೇರಿದರು. ನಂತರ. ಭಾರತವನ್ನು 200 ವರ್ಷಗಳವರೆಗೆ ಗುಲಾಮರನ್ನಾಗಿ ಮಾಡಲಾಯಿತು. 2019 ಚುನಾವಣೆ ಸೈದ್ಧಾಂತಿಕ ಯುದ್ಧವಾಗಿದೆ. ಇದು ದಶಕಗಳವರೆಗೆ ಪರಿಣಾಮವನ್ನು ಬೀರುತ್ತದೆ, ಆದ್ದರಿಂದ ಚುನಾವಣೆಯಲ್ಲಿ ಗೆಲ್ಲಲೇಬೇಕಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
New Delhiಅಮಿತ್ ಶಾ2019 ಲೋಕಸಭಾ ಚುನಾವಣೆ2019 Loksabha PollAmit Shaನವ ದೆಹಲಿBjp National Council Meetingಬಿಜೆಪಿ ರಾಷ್ಟ್ರೀಯ ಪರಿಷತ್ ಸಭೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


