ದೇಶ

ಕಾಶ್ಮೀರ ಜನತೆಯ ಆಶಯದಂತೆ ನಡೆಯುತ್ತೇನೆ: ಐಎಎಸ್ ತೊರೆದ ಶಾ ಫೈಸಲ್

ನನ್ನ ಮುಂದಿನ ನಡೆ ಕಾಶ್ಮೀರ ಜನತೆಯ ಆಶಯವನ್ನು ಅವಲಂಬಿಸಿದೆ ಎಂದು ಕಾಶ್ಮೀರದಲ್ಲಿ ನಡೆಯುತ್ತಿರುವ...

ಕಾಶ್ಮೀರ ಜನತೆಯ ಆಶಯದಂತೆ ನಡೆಯುತ್ತೇನೆ: ಐಎಎಸ್ ತೊರೆದ ಶಾ ಫೈಸಲ್
ಶಾ ಫೈಸಲ್
Published On :
ಶ್ರೀನಗರ: ನನ್ನ ಮುಂದಿನ ನಡೆ ಕಾಶ್ಮೀರ ಜನತೆಯ ಆಶಯವನ್ನು ಅವಲಂಬಿಸಿದೆ ಎಂದು ಕಾಶ್ಮೀರದಲ್ಲಿ ನಡೆಯುತ್ತಿರುವ ಹತ್ಯೆಗಳನ್ನು ಖಂಡಿಸಿ ಐಐಎಸ್ ಹುದ್ದೆ ತೊರೆದ ಶಾ ಫೈಸಲ್ ಅವರು ಗುರುವಾರ ಹೇಳಿದ್ದಾರೆ.
ತಮ್ಮ ಮುಂದಿನ ನಡೆಯ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ 2010ನೇ ಬ್ಯಾಚ್ ನ ಐಎಎಸ್ ಟಾಪರ್ ಶಾ ಫೈಸಲ್ ಅವರು, ನನ್ನ ರಾಜಕೀಯ ಜೀವನ ಫೇಸ್ ಬುಕ್ ನಲ್ಲಿ ಬರುವ ಕಮೆಂಟ್ ಗಳು ಅಥವಾ ಲೈಕ್ ಗಳನ್ನು ಅವಲಂಬಿಸಿಲ್ಲ. ಕಾಶ್ಮೀರಿ ಜನತೆಯ ಆಶಯದಂತೆ ನಡೆಯುತ್ತೇನೆ ಎಂದಿದ್ದಾರೆ.
ನಾನು ಐಎಎಸ್ ತ್ಯಜಿಸಿದ್ದಕ್ಕೆ ಶ್ಲಾಘನೆ ಹಾಗೂ ನಿಂದನೆ ಎರಡೂ ಸಿಕ್ಕಿದೆ. ಇದನ್ನು ನಾನು ಮೊದಲೇ ನಿರೀಕ್ಷಿಸಿದ್ದೆ ಎಂದಿರುವ ಫೈಸಲ್, ನೀವು ಫೇಸ್ ಬುಕ್ ಮತ್ತು ಟ್ವಿಟರ್ ನಿಂದ ಹೊರಬಂದು ನಾಳೆ ಶ್ರೀನಗರದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬಂದರೆ ಅಲ್ಲಿ ನನ್ನ ಭವಿಷ್ಯದ ಬಗ್ಗೆ ಚರ್ಚಿಸಬಹುದು ಎಂದು ಮನವಿ ಮಾಡಿದ್ದಾರೆ.
ನಿನ್ನೆಯಷ್ಟೇ ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ ಫೈಸಲ್ ಪ್ರಾದೇಶಿಕ ಪಕ್ಷ, ಉಮರ್ ಅಬ್ದುಲ್ಲಾ ಅವರ ನ್ಯಾಷನಲ್ ಕಾನ್ಫರೆನ್ಸ್ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.