ಭಾರತೀಯ ಸೇನೆಯಲ್ಲಿ ಸಲಿಂಗಕಾಮಕ್ಕೆ ಅವಕಾಶವಿಲ್ಲ: ಬಿಪಿನ್ ರಾವತ್
ಸುಪ್ರೀಂ ಕೋರ್ಟ್ ಸಮ್ಮತಿಯ ಸಲಿಂಗಕಾಮ ಅಪರಾಧ ಮುಕ್ತಗೊಳಿಸಿರಬಹುದು. ಆದರೆ ಭಾರತೀಯ ಸೇನೆಯಲ್ಲಿ ಸಲಿಂಗಕಾಮಕ್ಕೆ ಅವಕಾಶವಿಲ್ಲ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.

Published On :
ನವದೆಹಲಿ: ಸುಪ್ರೀಂ ಕೋರ್ಟ್ ಸಮ್ಮತಿಯ ಸಲಿಂಗಕಾಮ ಅಪರಾಧ ಮುಕ್ತಗೊಳಿಸಿರಬಹುದು. ಆದರೆ ಭಾರತೀಯ ಸೇನೆಯಲ್ಲಿ ಸಲಿಂಗಕಾಮಕ್ಕೆ ಅವಕಾಶವಿಲ್ಲ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
ಭಾರತೀಯ ಸೇನೆ ಸಲಿಂಗಕಾಮದ ಕುರಿತು ತನ್ನದೇ ಕಾನೂನು ಹೊಂದಿದೆ. ಹೀಗಾಗಿ ಸೇನೆಯಲ್ಲಿ ಇದಕ್ಕೆ ನಾವು ಅವಕಾಶ ಮಾಡಿಕೊಡುವುದಿಲ್ಲ ಎಂದು ವಾರ್ಷಿಕ ಪತ್ರಿಕಾಗೋಷ್ಠಿಯಲ್ಲಿ ರಾವತ್ ಹೇಳಿದ್ದಾರೆ.
ನಾವು ದೇಶದ ಕಾನೂನನ್ನು ಮೀರಿದವರಲ್ಲ. ಆದರೆ, ಭಾರತೀಯ ಸೇನೆಗೆ ಸೇರುತ್ತಿದ್ದಂತೆ ನೀವು ಅನುಭವಿಸುತ್ತಿರುವ ಹಕ್ಕುಗಳು ಹಾಗೂ ಅವಕಾಶಗಳಲ್ಲಿ ಕೆಲವು ಇಲ್ಲವಾಗುತ್ತವೆ. ಕೆಲವು ಕಾನೂನು ನಮಗೆ ಭಿನ್ನವಾಗಿರುತ್ತದೆ ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 6ರಂದು ಸಲಿಂಗಕಾಮ ಅಪರಾಧವಲ್ಲ ಎಂದು ಮಹತ್ವದ ತೀರ್ಪು ನೀಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


