ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಕಾಶ್ಮೀರಿ ಐಎಎಸ್ ಅಧಿಕಾರಿ ಷಾ ಫೈಸಲ್ ರಾಜೀನಾಮೆ!
ಕಾಶ್ಮೀರಿ ಯುವಕರ ಸ್ಪೂರ್ತಿಯಾಗಿದ್ದ ಐಎ ಎಸ್ ಅಧಿಕಾರಿ ಷಾ ಫೈಸಲ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ತಾವು ಚುನಾವಣಾ ರಾಜಕೀಯಕ್ಕೆ ಇಳಿಸ್ಯುವುದಾಗಿ ಹೇಳಿರುವ....

Published On :
ಶ್ರೀನಗರ: ಕಾಶ್ಮೀರಿ ಯುವಕರ ಸ್ಪೂರ್ತಿಯಾಗಿದ್ದ ಐಎ ಎಸ್ ಅಧಿಕಾರಿ ಷಾ ಫೈಸಲ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ತಾವು ಚುನಾವಣಾ ರಾಜಕೀಯಕ್ಕೆ ಇಳಿಸ್ಯುವುದಾಗಿ ಹೇಳಿರುವ ಅವರು ಕಾಶ್ಮೀರದಲ್ಲಿ ನಿರಂತರ ಅಶಾಂತಿಯ ವಾತಾವರಣದಿಂದ ಬೇಸತ್ತು ತಾವು ಈ ನಿರ್ಧಾರಕ್ಕೆ ಬಂದಿದ್ದಾಗಿ ಹೇಳಿದ್ದಾರೆ.
35 ವರ್ಷದ ಷಾ ಫೈಸಲ್ ಭಾರತೀಯ ಲೋಕಸೇವಾ ಆಯೋಗ್ದ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಕಾಶ್ಮೀರ ಸೇರಿ ದೇಶದ ನಾನಾ ಯುವಕರಿಗೆ ಸ್ಪೂರ್ತಿಯಾಗಿದ್ದರು.
"ಕಾಶ್ಮೀರದಲ್ಲಿ ಅಪ್ರಚೋದಿತ ಹತ್ಯೆಗಳು ನಿರಂತರವಾಗಿದ್ದು ಕೇಂದ್ರ ಸರ್ಕಾರ ಸೂಕ್ತ ಕ್ರ್ಮ ತೆಗೆದುಕೊಳ್ಳುವುದಕ್ಕೆ ವಿಫಲವಾಗಿದೆ. ಹೀಗಾಗಿ ನಾನು ಐಎ ಎಸ್ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಕಾಶ್ಮೀರದ ಜನರ ಬದುಕು ಅತಿ ಮುಖ್ಯವಾಗಿದೆ." ಅವರು ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಷಾ ಫೈಸಲ್ 2010ನೇ ಸಾಲಿನ ಐಎ ಎಸ್ ಅಧಿಕಾರಿಯಾಗಿದ್ದು ತಾವು ತನ್ನ ಮಿಂದಿನ ನಡೆ ಏನು ಎನ್ನುವುದನ್ನು ಶುಕ್ರವಾರ ಘೋಷಿಸುವುದಾಗಿ ಹೇಳಿದ್ದಾರೆ. ಆದರೆ ಅವರು ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಸೇರಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಾರಾಮುಲ್ಲಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಈ ಸಂಬಂಧ ಟ್ವೀಟ್ ಮಾಡಿರುವ ಓಮರ್ ಅಬ್ದುಲ್ಲಾ "ಫೈಸಲ್ನಿರ್ಧಾರಕ್ಕೆ ನಮ್ಮ ಸ್ವಾಗತವಿದೆ.ಅಧಿಕಾರಶಾಹಿಯ ನಷ್ಟ ರಾಜಕೀಯದ ಲಾಭ, ನಿಮಗೆ ರಾಜಕೀಯಕ್ಕೆ ಸ್ವಾಗತ" ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಜಮ್ಮು ಕಾಶ್ಮೀರNational Conferenceನ್ಯಾಷನಲ್ ಕಾನ್ಫರೆನ್ಸ್Shah FaesalJammu KasmirKasmir IAS officerಷಾ ಫೈಸಲ್ಕಾಶ್ಮೀರ ಐಎಎಸ್ ಅಧಿಕಾರಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


