ದೇಶ

ಸಹೋದ್ಯೋಗಿ ಪತ್ನಿ ಜತೆ ಅನೈತಿಕ ಸಂಬಂಧ: ಕರ್ನಲ್ ವಿರುದ್ಧ ಕೋರ್ಟ್ ವಿಚಾರಣೆ

ಸಹೋದ್ಯೋಗಿ ಸೇನಾಧಿಕಾರಿ ಪತ್ನಿಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ ಆರೋಪ ಎದುರಿಸುತ್ತಿರುವ ಭಾರತೀಯ ಸೇನೆಯ ಕರ್ನಲ್ ವಿರುದ್ಧ ವಿಚಾರಣೆ ನಡೆಸುವಂತೆ ಸಾಮಾನ್ಯ ಕೋರ್ಟ್ ಗೆ ಸೇನಾ ಕೋರ್ಟ್ ಶಿಫಾರಸು ಮಾಡಿದೆ.

ಸಹೋದ್ಯೋಗಿ ಪತ್ನಿ ಜತೆ ಅನೈತಿಕ ಸಂಬಂಧ: ಕರ್ನಲ್ ವಿರುದ್ಧ  ಕೋರ್ಟ್ ವಿಚಾರಣೆ
ಸಾಂದರ್ಭಿಕ ಚಿತ್ರ
Published On :
ನವದೆಹಲಿ: ಸಹೋದ್ಯೋಗಿ ಸೇನಾಧಿಕಾರಿ ಪತ್ನಿಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ ಆರೋಪ ಎದುರಿಸುತ್ತಿರುವ ಭಾರತೀಯ ಸೇನೆಯ ಕರ್ನಲ್ ವಿರುದ್ಧ ವಿಚಾರಣೆ ನಡೆಸುವಂತೆ ಸಾಮಾನ್ಯ ಕೋರ್ಟ್ ಗೆ ಸೇನಾ ಕೋರ್ಟ್ ಶಿಫಾರಸು ಮಾಡಿದೆ.
ಆರೋಪಿ ಅಧಿಕಾರಿ ದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ತನ್ನ ಪತ್ನಿಯ ಜತೆಗೆ ಅಕ್ರಮ ಸಂಬಂಧ ಹೊಂದಿದ್ದರು ಎಂದು ಅದೇ ನಗರದಲ್ಲೇ ಕಾರ್ಯನಿರ್ವಹಿಸುತ್ತಿದ್ದ ಮತ್ತೊಬ್ಬ ಕರ್ನಲ್ ಆರೋಪಿಸಿದ್ದಾರೆ.  
ತನ್ನ ಪತ್ನಿಯ ಮೊಬೈಲ್ ಫೋನ್ ನಲ್ಲಿ 'ಆಕ್ಷೇಪಾರ್ಹ ಚಿತ್ರಗಳನ್ನು' ಅಧಿಕಾರಿ ನೋಡಿದ ಮೇಲೆ ಆರೋಪಿ ವಿರುದ್ಧ ದೂರು ದಾಖಲಿಸಿದ್ದರು. ದೂರಿನ ಆಧಾರದಲ್ಲಿ ಎರಡು ವರ್ಷಗಳಿಂದ ವಿಚಾರಣೆ ನಡೆಯುತ್ತಿತ್ತು. 
ಇತ್ತೀಚೆಗಷ್ಟೇ ಸೇನಾ ಅಧಿಕಾರಿಗಳು, ಮೂರು ಆರೋಪಕ್ಕೆ ಸಂಬಂಧಿಸಿದಂತೆ ಸೇನಾ ಕಾಯ್ದೆ ಅಡಿಯಲ್ಲಿ ಸಾಮಾನ್ಯ ಕೋರ್ಟ್ ನಲ್ಲಿ ಈ ಪ್ರಕರಣದ ವಿಚಾರಣೆ ನಡೆಯಲಿ ಎಂದು ಶಿಫಾರಸು ಮಾಡಿದ್ದರು.
ಸೇನಾ ಅಧಿಕಾರಿಗಳು ವಿಚಾರಣೆ ವೇಳೆ ಅಧಿಕಾರಿಯ ಫೋನ್ ಅನ್ನು ಸಾಕ್ಷ್ಯವಾಗಿ ತೆಗೆದುಕೊಂಡಿದ್ದರು. ಆರೋಪಿಯು ದೂರುದಾರರ ಪತ್ನಿಗೆ ಅಶ್ಲೀಲ ವಿಡಿಯೋಗಳನ್ನು ಕಳುಹಿಸಿದ್ದು ಸಹ ಪತ್ತೆಯಾಗಿತ್ತು.ಅಲ್ಲದೆ ಪರಸ್ಪರರು ಲೈಂಗಿಕ ವಿಚಾರಗಳನ್ನು ಒಳಗೊಂಡ ಸಂದೇಶಗಳ ವಿನಿಮಯ ಮಾಡಿಕೊಂಡಿದ್ದು ಪತ್ತೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.