ಬುಲಂದ್ ಶಹರ್ ಪೋಲೀಸ್ ಹತ್ಯೆ: 'ಎ ಒನ್' ಆರೋಪಿ ಯೋಗೇಶ್ ರಾಜ್ ಬಂಧನ
ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ಸಂಭವಿಸಿದ್ದ ಹಿಂಸಾಚಾರದಲ್ಲಿ ಪೋಲೀಸ್ ಅಧಿಕಾರಿ ಹತ್ಯೆ ಪ್ರಕರಣ ಸಂಬಂಧ ಎ ಒನ್ ಆರೋಪಿಯನ್ನು ಬಂಧಿಸಲಾಗಿದೆ.

Published On :
ಲಖನೌ: ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ಸಂಭವಿಸಿದ್ದ ಹಿಂಸಾಚಾರದಲ್ಲಿ ಪೋಲೀಸ್ ಅಧಿಕಾರಿ ಹತ್ಯೆ ಪ್ರಕರಣ ಸಂಬಂಧ 'ಎ ಒನ್' ಆರೋಪಿಯನ್ನು ಬಂಧಿಸಲಾಗಿದೆ.
ಬಜರಂಗದಳ ನಾಯಕರೇ ತಲೆಮರೆಸಿಕೊಂಡಿದ್ದ ಆರೋ ಯೋಗೇಶ್ ರಾಜ್ ನನ್ನು ಹಿಡಿದು ಪೋಲೀಸರಿಗೆ ಒಪ್ಪಿಸಿದ್ದಾರೆ.
ಡಿಸೆಂಬರ್ ನಲ್ಲಿ ನಡೆದಿದ್ದ ಬುಲಂದ್ ಶಹರ್ ಗುಂಪು ಘರ್ಷಣೆಯಲ್ಲಿ ಹಾಡಹಗಲೇ ಪೋಲೀಸ್ ಅಧಿಕಾರಿ ಹತ್ಯೆ ನಡೆದಿದ್ದು ದೇಶಕ್ಕೆ ದೇಶವೇ ಬೆಚ್ಚಿ ಬೀಳುವಂತಾಗಿತ್ತು. ಈ ಹತ್ಯೆ ಬಳಿಕ ಯೋಗೇಶ್ ರಾಜ್ ರಹಸ್ಯ ಸ್ಥಳದಲ್ಲಿದ್ದುಕೊಂಡು ವೀಡಿಯೋ ಹರಿಯಬಿಟ್ಟಿದ್ದನು. ಕಾಡಿನ ನಡುವೆ ಹಸುವಿನ ಕಳೇಬರ ಪತ್ತೆಯಾದ ಬಳಿಕ ಸ್ಥಳೀಯ ಗುಂಪಿಗೆ ಹಿಂಸಾಚಾರಕ್ಕೆ ಪ್ರಚೋದನೆ ನೀಡಿರುವ ಆರೋಪ ಯೋಗೇಶ್ ಮೇಲಿದೆ. ಘರ್ಷಣೆಗೆ ಮುನ್ನವೇ ಈತ ಪೋಲೀಸರಿಗೆ ಗೋಹತ್ಯೆ ಕುರಿತು ದೂರು ಸಲ್ಲಿಸಿದ್ದು ಆ ವೇಳೆ ಹತ್ತು ಮಂದಿ ಆರೋಪಿಗಳ ಹೆಸರು ಸೂಚಿಸಿದ್ದನೆನ್ನಲಾಗಿದೆ.
ಡಿಸೆಂಬರ್ 3ರಂದು ನಡೆದ ಘಟನೆಯಲ್ಲಿ ಪೋಲೀಸ್ ಅಧಿಕಾರಿ ಸುಬೋಧ್ ಕುಮಾರ್ ಸಿಂಗ್ ಅವರನ್ನು ಗುರಿಯಾಗಿಸಿಕೊಂಡು ಸುಮಾರು ನಾಲ್ಕು ನೂರಕ್ಕೆ ಹೆಚ್ಚಿನ ಜನರ ಗುಂಪು ದಾಳಿ ಮಾಡಿತ್ತು. ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆ ನಡೆಸಿದ ಗುಂಪು ಪೋಲೀಸ್ ಅಧಿಕಾರಿ ಪ್ರಯಾಣಿಸುತ್ತಿದ್ದ ಕಾರನ್ನು ಹಿಂಬಾಲಿಸಿ ಹತ್ಯೆಗೈಯ್ದಿತ್ತು. ಈ ವೇಳೆ ಸಂಭವಿಸಿದ್ದ ಹಿಂಸಾಚಾರದಲ್ಲಿ ಓರ್ವ ಯುವಕ ಸಹ ಸಾವನ್ನಪಿದ್ದನು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Uttar pradeshಉತ್ತರ ಪ್ರದೇಶMob violenceYogesh RajBulandshahr cop murderಯೋಗೇಶ್ ರಾಜ್ಬುಲಂದ್ ಶಹರ್ ಪೋಲೀಸ್ ಕೊಲೆಗುಂಪುದಾಳಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


