ವಂದೇ ಮಾತರಂ ವಿಷಯದಲ್ಲಿ ಬಿಜೆಪಿ ರಾಜಕೀಯ ಮಾಡುವುದು ತಪ್ಪು: ಕಮಲ್ ನಾಥ್
ರಾಷ್ಟ್ರೀಯ ಗೀತೆಯಾಗಿರುವ ವಂದೇ ಮಾತರಂ ಗೆ ಶೀಘ್ರವೇ ಹೊಸ ಲುಕ್ ನೀಡಲಾಗುವುದು, ಈ ಸಂಬಂಧ ಆದಷ್ಟು ಬೇಗ ಅಧಿಕೃತ ಪ್ರಕಟಣೆ ....

Published On :
ಭೂಪಾಲ್: ಪ್ರತಿ ತಿಂಗಳ ಮೊದಲ ಕಾರ್ಯನಿರ್ವಹಣೆ ದಿನದಂದು ಸಚಿವಾಲಯಗಳಲ್ಲಿ ವಂದೇ ಮಾತರಂ ಹಾಡುವುದಕ್ಕೆ ಬ್ರೇಕ್ ಹಾಕಿದ ಮಧ್ಯ ಪ್ರದೇಶ ಸರ್ಕಾರದ ನಡೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತ ಪಡಿಸಿದೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಮಧ್ಯ ಪ್ರದೇಶ ಸಿಎಂ ಕಮಲ್ ನಾಥ್, ರಾಷ್ಟ್ರೀಯ ಗೀತೆಯಾಗಿರುವ ವಂದೇ ಮಾತರಂ ಗೆ ಶೀಘ್ರವೇ ಹೊಸ ಲುಕ್ ನೀಡಲಾಗುವುದು, ಈ ಸಂಬಂಧ ಆದಷ್ಟು ಬೇಗ ಅಧಿಕೃತ ಪ್ರಕಟಣೆ ಹೊರಡಿಸಲಾಗುವುದು ಎಂದು ಹೇಳಿದ್ದಾರೆ.
ವಂದೇ ಮಾತರಂ ಗೀತೆ ವಿಷಯವನ್ನು ರಾಜಕೀಯಗೊಳಿಸುವುದು ತಪ್ಪು, ರಾಮ ಮಂದಿರ ಮತ್ತು ವಂದೇ ಮಾತರಂ ವಿಷಯದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ, ಇದನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ,
ಈ ಹಿಂದೆ ಮದ್ಯ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ರಾಷ್ಟ್ರೀಯ ಗೀತೆ ವಂಂದೆ ಮಾತರಂ ಹಾಡುವ ಸಂಪ್ರದಾಯ ಪಾಲಿಸಿಕೊಂಡು ಬರುತ್ತಿತ್ತು, ಅದಕ್ಕೆ ಮಂಗಳವಾರ ಸಿಎಂ ಕಮಲ್ ನಾಥ್ ಬ್ರೇಕ್ ಹಾಕಿ್ದರು .
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


