ಪಿಒಕೆನಲ್ಲಿ ಭಾರತದ ಏರ್ ಸ್ಟ್ರೈಕ್ ಬೆನ್ನಲ್ಲೇ ಮಗುವಿಗೆ 'ಮಿರಾಜ್ ಸಿಂಗ್' ಎಂದು ಹೆಸರಿಟ್ಟ ದಂಪತಿ!
ಭಾರತ ವಾಯುಸೇನೆ ಮಂಗಳವಾರ ಮುಂಜಾನೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಮುನ್ನೂರಕ್ಕೆ ಹೆಚ್ಚು ಉಗ್ರರನ್ನು ಹೊಡೆದುರುಳಿಸಿದೆ. ಈ ಕಾರ್ಯಾಚರಣೆಯಲ್ಲಿ ಮಹತ್ವವಾಗಿ ಬಳಕೆಯಾಗಿದ್ದ....

Published On :
ಜೈಪುರ: ಭಾರತ ವಾಯುಸೇನೆ ಮಂಗಳವಾರ ಮುಂಜಾನೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಮುನ್ನೂರಕ್ಕೆ ಹೆಚ್ಚು ಉಗ್ರರನ್ನು ಹೊಡೆದುರುಳಿಸಿದೆ. ಈ ಕಾರ್ಯಾಚರಣೆಯಲ್ಲಿ ಮಹತ್ವವಾಗಿ ಬಳಕೆಯಾಗಿದ್ದ "ಮಿರಾಜ್-2000" ಯುದ್ಧವಿಮಾನವಾಗಿದ್ದು ಈ ಕಾರ್ಯಾಚರಣೆ ನಡೆದ ಕೆಲವೇ ಗಂಟೆಗಳಲ್ಲಿ ಹುಟ್ಟಿದ `ಮಿರಾಜ್ ಸಿಂಗ್ ರಾಥೋರ್’ ಎಂದು ಹೆಸರಿಉಟ್ಟಿದ್ದಾರೆ.
ರಾಜಸ್ಥಾನದ ನಾಗ್ಪುರ ಜಿಲ್ಲೆಯ ದಾಬ್ದಾ ಗ್ರಾಮದ ನಿವಾಸಿ ಮಹಾವೀರ್ ಸಿಂಗ್ ಹಾಗೂ ಸೋನಮ್ ಸಿಂಗ್ ದಂಪತಿಗಳ ಮಗುವಿಗೆ ಮಿರಾಜ್ ಸಿಂಗ್ ಎಂದು ಹೆಸರಿಡಲಾಗಿದೆ.ವೀ ಮೂಲಕ ವಾಯುಸೇನೆಯ ಕಾರ್ಯಕ್ಕೆ ಸೆಲ್ಯೂಟ್ ಹೇಳಿದ್ದಾರೆ.
ಇನ್ನು ವಿಶೇಷವೆಂದರೆ ಈ ದಂಪತಿಯ ಕುಟುಂಬದ ಅನೇಕರು ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರದ ಬಾಲಕೋಟ್, ಮುಜಾಫರ್ ಬಾದ್ ಹಾಗೂ ಚಕೋಟಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಿರಾಜ್ ಯುದ್ಧ ವಿಮಾನ ಬಳಸಿ ಮುನ್ನೂರಕ್ಕೆ ಹೆಚ್ಚು ಉಗ್ರರ ಸದೆ ಬಡಿಯಲಾಗಿತ್ತು.
ದೆಹಲಿ ಆಟೋಚಾಲಕನಿಂದ ಫ್ರೀ ರೈಡ್!
ಇದೆಲ್ಲದರ ಮಧ್ಯೆ ದೆಹಲಿಯ ಆಟೋ ಚಾಲಕನೊಬ್ಬ ಮಂಗಳವಾರ ನಡೆದ ಏರ್ ಸ್ಟ್ರೈಕ್ ಅನ್ನು ಸಂಭ್ರಮಿಸಿದ್ದು ದಿನಪೂರ್ತಿ ಎಲ್ಲಾ ಪ್ರಯಾಣಿಕರನ್ನು ಉಚಿತವಾಗಿ ಅವರವರ ನೆಲೆಗಳಿಗೆ ತಲುಪಿಸಿದ್ದಾರೆ. ಹುತಾತ್ಮ ಯೋಧರಿಗೆ ನಮನ ಸಲ್ಲಿಸಲು ಹಾಗೂ ಭಾರತೀಯ ವಾಯು ಪಡೆ ನಡೆಸಿದ ಕಾರ್ಯಾಚರಣೆಗೆ ಗೌರವ ಸಲ್ಲಿಸಲು ತಾನು ಈ ಕೆಲಸ ಮಾಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


