ಪ್ರತಿದಾಳಿಗೆ ಯತ್ನಿಸಿದ್ದ ಪಾಕ್‌ನ ಎಫ್-16 ಜೆಟ್, 'ಮಿರಾಜ್-2000' ಮಿಂಚಿನ ದಾಳಿಗೆ ಹೆದರಿ ವಾಪಸ್!
ಪಾಕಿಸ್ತಾನ ನೆಲದಲ್ಲಿ ಮಿರಾಜ್-2000 ಯುದ್ಧ ವಿಮಾನ ಭೀಕರ ಬಾಂಬ್ ದಾಳಿ ನಡೆಸುತ್ತಿದ್ದಾಗ ಪ್ರತಿದಾಳಿಗೆ ಮುಂದಾಗಿದ್ದ ಪಾಕಿಸ್ತಾನ ಎಫ್-16 ಜೆಟ್ ಯುದ್ಧ ವಿಮಾನ ಹೆದರಿ ವಾಪಸಾಗಿದೆ ಎಂದು ವರದಿಯಾಗಿದೆ.

Published On :
ನವದೆಹಲಿ: ಪಾಕಿಸ್ತಾನ ನೆಲದಲ್ಲಿ ಮಿರಾಜ್-2000 ಯುದ್ಧ ವಿಮಾನ ಭೀಕರ ಬಾಂಬ್ ದಾಳಿ ನಡೆಸುತ್ತಿದ್ದಾಗ ಪ್ರತಿದಾಳಿಗೆ ಮುಂದಾಗಿದ್ದ ಪಾಕಿಸ್ತಾನ ಎಫ್-16 ಜೆಟ್ ಯುದ್ಧ ವಿಮಾನ ಹೆದರಿ ವಾಪಸಾಗಿದೆ ಎಂದು ವರದಿಯಾಗಿದೆ.
ಹೌದು, ಭಾರತೀಯ ವಾಯುಸೇನೆ ನಡೆಸಿದ ಭೀಕರ ಬಾಂಬ್ ದಾಳಿ ನಡೆಸುತ್ತಿದ್ದಾಗ ಪಾಕಿಸ್ತಾನ ಎಫ್-16 ಯುದ್ಧ ವಿಮಾನ ಪ್ರತಿದಾಳಿಗೆ ಮುಂದಾಗಿತ್ತು. ಆದರೆ ಮಿರಾಜ್-2000 ಮಿಂಚಿನ ವೇಗದ ತೀವ್ರತ್ಕೆ ಹೆದರಿ ತನ್ನ ಸೇನಾ ನೆಲೆಗೆ ವಾಪಸಾಗಿದೆ ಎಂದು ಹೇಳಲಾಗುತ್ತಿದೆ.
ಮಿರಾಜ್-2000 ಯುದ್ಧ ವಿಮಾನ ಮುಂಜಾನೆ 3.30ರ ಸುಮಾರಿಗೆ 1000 ಕೆಜಿ ತೂಕದ 10 ಬಾಂಬ್ ಗಳನ್ನು ಸಿಡಿಸಿದ್ದು ಇದರಲ್ಲಿ ಜೈಷೆ ಎ ಮೊಹಮ್ಮದ್ ಉಗ್ರ ಸಂಘಟನೆಯ ಮೂರು ಲ್ಯಾಂಚ್ ಪ್ಯಾಡ್ ಗಳನ್ನು ಧ್ವಂಸ ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Pakistanಪಾಕಿಸ್ತಾನಫೈಟರ್ ಜೆಟ್ಭಾರತೀಯ ವಾಯುಸೇನೆfighter jetsterrorist campIAF strikes in Pakistanಭಯೋತ್ಪಾದಕರ ಅಡಗುತಾಣ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


