ದೇಶ

ಪ್ರಿಯಾಂಕಾ ಬಳಿಕ ಸಕ್ರಿಯ ರಾಜಕೀಯಕ್ಕೆ ರಾಬರ್ಟ್ ವಾದ್ರಾ ಎಂಟ್ರಿ?

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಸೋದರ ಸಂಬಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ರಾಬರ್ಟ್ ವಾದ್ರಾ ತಾವು ರಾಜಕೀಯ ಪ್ರವೇಶಿಸುವ ಸೂಚನೆ ನೀಡಿದ್ದಾರೆ.

ಪ್ರಿಯಾಂಕಾ ಬಳಿಕ ಸಕ್ರಿಯ ರಾಜಕೀಯಕ್ಕೆ ರಾಬರ್ಟ್ ವಾದ್ರಾ ಎಂಟ್ರಿ?
ರಾಬರ್ಟ್ ವಾದ್ರಾ
Published On :
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಸೋದರ ಸಂಬಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ರಾಬರ್ಟ್ ವಾದ್ರಾ ತಾವು ರಾಜಕೀಯ ಪ್ರವೇಶಿಸುವ ಸೂಚನೆ ನೀಡಿದ್ದಾರೆ. ಪ್ರಿಯಾಂಕಾ ಗಾಂಧಿ ಸಕ್ರಿಯ ರಾಜಕೀಯ ಪ್ರವೇಶಿಸಿದ ಸುಮಾರು ಒಂದು ತಿಂಗಳ ನಂತರ ರಾಬರ್ಟ್ ವಾದ್ರಾ ಈ ಸೂಚನೆ ನಿಡಿದ್ದಾರೆ.
"ಇಷ್ಟು ವರ್ಷದ ಅನುಭವ ಹಾಗೂ ಕಲಿಕೆಯನ್ನು ವ್ಯರ್ಥವಾಗಿಸುವುದಿಲ್ಲ, ಇದನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಲಬೇಕಿದೆ" ರಾಬರ್ಟ್ ವಾದ್ರಾ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
"ದೇಶದ ಹಲವು ಭಾಗಗಳಲ್ಲಿ ನಾನು ಹಲವು ವರ್ಷಗಳ ಕಾಲ, ತುಇಂಗಳ ಕಾಲ ಕೆಲಸ ಮಾಡಿದ್ದೇನೆ. ಆದರೆ ಉತ್ತರ ಪ್ರದೇಶ ಜನರಿಗೆ ಹೆಚ್ಚು ಮಾಡಬೇಕೆಂಬ ಭಾವನೆ ನನ್ನಲ್ಲಿ ಮೂಡಿಸಿದೆ.ಅಲ್ಲದೆ ಅವರು ಸಾಧ್ಯವಾದಷ್ಟು ಸಣ್ಣ ಸಣ್ಣ ಬದಲಾವಣೆಗಳನ್ನು ನನ್ನಿಂದ ಮಾಡಿಸಿದ್ದಾರೆ. ಅವರು ನನ್ನನ್ನು ಅವರ ಊರುಗಳಲ್ಲಿ ಕಂಡಾಗ  ನನಗೆ, ನಿಜವಾದ ಪ್ರೀತಿ ಹಾಗೂ ಗೌರವ ಸೂಚಿಸಿದ್ದಾರೆ.
"ಇಷ್ಟೃ ವರ್ಷಗಳ ಕಲಿಕೆ ಹಾಗೂ ಅನುಭವವನ್ನು ಸುಮ್ಮನೆ ವ್ಯರ್ಥವಾಗಲು ಬಿಡುವುದಿಲ್ಲ.ಇದನ್ನು ಉತ್ತಮವಾಗಿ ಬಳಸಿಕೊಳ್ಳುತ್ತೇನೆ.ನನ್ನ ಮೇಲಿನ ಈ ಎಲ್ಲಾ ಆರೋಪ, ಪ್ರತ್ಯಾರೋಪಗಳೂ ಮುಗಿದ ನಂತರ ನಾನು ಜನರಿಗೆ ಸೇವೆ ಸಲ್ಲಿಸಬೇಕು, ಇದಕ್ಕಾಗಿ ದೊಡ್ಡ ಮಟ್ತದಲ್ಲಿ ಸಾರ್ವಜನಿಕ ಸೇವಾಕ್ಷೇತ್ರಕ್ಕೆ ಅಡಿಯಿರಿಸಬೇಕೆಂದು ಬಯಸುತ್ತೇನೆ." ವಾದ್ರಾ ಬರೆದುಕೊಂಡಿದ್ದಾರೆ.
Story image
ವಾದ್ರಾ ಪತ್ನಿ ಪ್ರಿಯಾಂಕಾ ಗಾಂಧಿ ಇತ್ತೀಚೆಗೆ ಉತ್ತರ ಪ್ರದೇಶದ ಪೂರ್ವ ವಿಭಾಗಕ್ಕೆ  ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. ಇನ್ನು ಇಡಿ ಪ್ರಕರಣದಲ್ಲಿ ವಾದ್ರಾ ವಿಚಾರಣೆ ನಡೆಯುವ ಮುನ್ನ ಅವರು ಸಹ ದೆಹಲಿ, ಜೈಪುರದ ಅನೇಕ ಸಭೆಗಳಲ್ಲಿ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಗಳಾಗಿದ್ದಾರೆ. ಈಗ ತಾವು ದೊಡ್ಡ ಮಟ್ಟದ ಸಾರ್ವಜನಿಕ ಸೇವೆ ನಡೆಸುವುದಾಗಿ ಹೇಳಿಕೊಳ್ಳುವ ಮೂಲಕ ತಾವೂ ರಾಜಕೀಯಕ್ಕೆ ಧುಮುಕುವ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.